ಭಾರತ, ಮಾರ್ಚ್ 18 -- BIS Raids on Amazon Flipkart: ಕಡ್ಡಾಯ ಪ್ರಮಾಣೀಕರಣ ಮಾನದಂಡಗಳನ್ನು ಉಲ್ಲಂಘಿಸಿದ್ದಕ್ಕಾಗಿ ಭಾರತೀಯ ಮಾನದಂಡಗಳ ಬ್ಯೂರೋ (ಬಿಐಎಸ್) ಅಮೆಜಾನ್, ಬಿಗ್‌ಬಾಸ್ಕೆಟ್ ಮತ್ತು ಫ್ಲಿಪ್‌ಕಾರ್ಟ್ ಸೇರಿದಂತೆ ಪ್ರಮುಖ ಇ-ಕಾಮರ್ಸ್ ತಾಣಗಳಿವೆ ನೋಟಿಸ್‌ ನೀಡಿದೆ. ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಬಿಐಎಸ್, ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ಗೋದಾಮುಗಳ ಮೇಲೆ ದಾಳಿ ಮಾಡಿ ಬಿಐಎಸ್ ಪ್ರಮಾಣೀಕರಣದ ಕೊರತೆಯಿರುವ ಉತ್ಪನ್ನಗಳನ್ನು ವಶಪಡಿಸಿಕೊಂಡಿದೆ.

ವಸ್ತುಗಳನ್ನು ವಶಪಡಿಸಿಕೊಂಡ ನಂತರ ಬಿಎಸ್‌ಐ ಸಂಸ್ಥೆಯು ಬಿಎಸ್‌ಐ ಕಾಯ್ದೆ 2016ರ ಪ್ರಕಾರ ಇ-ಕಾಮರ್ಸ್‌ ತಾಣಗಳನ್ನು ಹೊಣೆ ಮಾಡಲು ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದೆ. ಬಿಐಎಸ್ ಕಾಯ್ದೆ, 2016 ರ ಸೆಕ್ಷನ್ 17(1) ಮತ್ತು 17(3) ರ ಉಲ್ಲಂಘನೆಗಾಗಿ ಈ ವೇದಿಕೆಗಳ ವಿರುದ್ಧ 2 ಪ್ರಕರಣಗಳನ್ನು ದಾಖಲಿಸಿದೆ.

ಎಲ್ಲಾ ಉತ್ಪನ್ನಗಳ ಮಾರಾಟಗಾರರು ಅನ್ವಯವಾಗುವ ಕಾನೂನುಗಳು, ನಿಯಮಗಳು ಮತ್ತು ಅಮೆಜಾನ್ ನೀ...