ಭಾರತ, ಮಾರ್ಚ್ 16 -- 'ದಿ ರಾಜಾ ಸಾಬ್' ಚಿತ್ರದ ಬಗ್ಗೆ ಕುತೂಹಲ ಸೃಷ್ಟಿಯಾಗಿದೆ. ಪ್ಯಾನ್ ಇಂಡಿಯಾ ರೆಬೆಲ್ ಸ್ಟಾರ್ ಪ್ರಭಾಸ್ ಅವರ ಅಭಿಮಾನಿಗಳು ಈ ಚಿತ್ರಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ. ಪ್ರಭಾಸ್ ತಮ್ಮ ಮೊದಲ ಹಾರರ್ ಹಾಗೂ ಹಾಸ್ಯ ಮಿಶ್ರಿತ ಚಿತ್ರವನ್ನು ನಿರ್ಮಿಸುತ್ತಿರುವುದರಿಂದ ಕುತೂಹಲ ಇನ್ನೂ ಹೆಚ್ಚಾಗಿದೆ. ಮಾರುತಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. 'ದಿ ರಾಜಾ ಸಾಬ್' ಸಿನಿಮಾದಲ್ಲಿ ಪ್ರಭಾಸ್ ಹೊಸದೊಂದು ರೀತಿಯಲ್ಲಿ ಅಭಿಮಾನಗಳೆದುರು ಬರಲಿದ್ದಾರೆ. ಏಪ್ರಿಲ್ 10ರಂದು ಈ ಸಿನಿಮಾ ಬಿಡುಗಡೆಯಾಗಲಿದೆ ಎಂದು ತಯಾರಕರು ಈ ಹಿಂದೆಯೇ ಘೋಷಿಸಿದ್ದರು. ಆದರೆ, ಏಪ್ರಿಲ್ 10ರಂದು ಈ ಸಿನಿಮಾ ಬಿಡುಗಡೆಯಾಗುವುದಿಲ್ಲ ಎಂದು ಹೇಳಲಾಗುತ್ತಿದೆ.

ಆಗಸ್ಟ್ ಮಧ್ಯದಲ್ಲಿ 'ದಿ ರಾಜಾ ಸಾಬ್' ಬಿಡುಗಡೆ ಮಾಡಲು ತಂಡ ನಿರ್ಧರಿಸಿದೆ ಎಂದು ವರದಿಯಾಗಿದೆ. ಆಗಸ್ಟ್ 15ರಂದು ಬಿಡುಗಡೆಯಾಗಬಹುದು ಎಂಬ ವದಂತಿಗಳು ಹೊರಬಂದಿವೆ. ಆಗಸ್ಟ್ ಬಿಡುಗಡೆಯ ಬಗ್ಗೆ ಶೀಘ್ರದಲ್ಲೇ ಅಧಿಕೃತ ಪ್ರಕಟಣೆ ಹೊರಬೀಳಲಿದೆ ಎಂದು ಹೇಳಲಾಗುತ್ತಿದೆ.

ರಾಜಾ ಸಾಬ...