Delhi, ಮಾರ್ಚ್ 31 -- ದೆಹಲಿ: ಸತತ ಹನ್ನೊಂದು ವರ್ಷದಿಂದ ಪ್ರಧಾನಿಯಾಗಿರುವ ನರೇಂದ್ರ ಮೋದಿ ಅವರು ಬರುವ ಸೆಪ್ಟಂಬರ್‌ನಲ್ಲಿ ತಮ್ಮ ಹುದ್ದೆಯನ್ನು ತ್ಯಜಿಸುವರೇ? ಈ ವರ್ಷದಲ್ಲಿಯೇ ಹೊಸ ಪ್ರಧಾನಿ ನೇಮಕಕ್ಕೆ ದಾರಿ ಮಾಡಿಕೊಡಲಿದ್ದಾರೆಯೇ. ಏಕೆಂದರೆ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರದಂದು ನಾಗ್ಪುರದಲ್ಲಿರುವ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಕೇಂದ್ರ ಕಚೇರಿಗೆ ಭೇಟಿ ನೀಡಿದ ನಂತರ ಇಂತಹ ಚರ್ಚೆಗಳು ಶುರುವಾಗಿವೆ. ಅದರಲ್ಲೂ ಮಹಾರಾಷ್ಟ್ರದವರೇ ಮುಂದಿನ ಪ್ರಧಾನಿಯಾಗುವರು ಎನ್ನುವ ಚರ್ಚೆಗಳೂ ನಡೆದಿವೆ. ಶಿವಸೇನೆ( ಠಾಕ್ರೆ ಬಣ) ಮುಖಂಡ ಸಂಜಯ್‌ ರಾವುತ್‌ ನೀಡಿರುವ ಹೇಳಿಕೆಗಳು ಇಂತಹದೊಂದು ಚರ್ಚೆಗೆ ವೇದಿಕೆಗೆ ಒದಗಿಸಿವೆ. ಅದರಲ್ಲೂ ಮೋದಿ ಅವರು ನಾಗ್ಪುರದಲ್ಲಿ ರಾಜೀನಾಮೆ ಘೋಷಿಸಿ ಬಂದಿದ್ದಾರೆ ಎಂದು ರಾವುತ್‌ ಹೇಳಿದ್ದು. ಇದಕ್ಕೆ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್‌ ಅವರು, ತಂದೆ ಇದ್ದಾಗಲೇ ಉತ್ತರಾಧಿಕಾರಿ ಬಗ್ಗೆ ಯೋಚನೆ ಮಾಡುವವರು ನಾವಲ್ಲ ಎಂದು ತಿರುಗೇಟು ನೀಡಿದ್ದಾರೆ.

ಶಿವಸೇನಾ (UBT)ದ ನಾಯಕ ಸಂಜಯ್ ರಾವತ್ ಸೋಮ...