Bengaluru, ಮೇ 7 -- ಅರ್ಥ: ಭರತವಂಶ ಶ್ರೇಷ್ಠನಾದ ಅರ್ಜುನನೆ, ಎಲ್ಲ ದೇಹಗಳಲ್ಲಿರುವ ಕ್ಷೇತ್ರಜ್ಞನು ನಾನೇ. ಈ ದೇಹವನ್ನೂ ಅದರ ಕ್ಷೇತ್ರಜ್ಞನನ್ನೂ ತಿಳಿಯುವುದೇ ಜ್ಞಾನ ಎನ್ನುವುದನ್ನು ನೀನು ಅರ್ಥಮಾಡಿಕೊಳ್ಳಬೇಕು. ಇದೇ ನನ್ನ ಅಭಿಪ್ರಾಯ.

ಭಾವಾರ್ಥ: ದೇಹ ಮತ್ತು ಕ್ಷೇತ್ರಜ್ಞ, ಆತ್ಮ ಮತ್ತು ಪರಮಾತ್ಮ ಈ ವಿಷಯವನ್ನು ಚರ್ಚಿಸುವಾಗ ನಾವು ಅಧ್ಯಯನ ಮಾಡಬೇಕಾದ ಮೂರು ಬೇರೆ ಬೇರೆ ವಿಷಯಗಳಿವೆ ಪ್ರಭು, ಜೀವಿ ಮತ್ತು ಜಡವಸ್ತು. ಪ್ರತಿಯೊಂದು ದೇಹದಲ್ಲಿಯೂ, ಚಟುವಟಿಕೆಗಳ ಪ್ರತಿಯೊಂದು ಕ್ಷೇತ್ರದಲ್ಲಿಯೂ ಎರಡು ಆತ್ಮಗಳಿವೆ. ವ್ಯಕ್ತಿಗತ ಆತ್ಮ ಮತ್ತು ಪರಮಾತ್ಮ ಪರಮಾತ್ಮನು ದೇವೋತ್ತಮ ಪರಮ ಪುರುಷನಾದ ಕೃಷ್ಣನ ಸ್ವಾಂಶ ವಿಸ್ತರಣೆಯಾದದ್ದರಿಂದ, ಕೃಷ್ಣನು "ನಾನು ಕ್ಷೇತ್ರಜ್ಞ, ಆದರೆ ವ್ಯಕ್ತಿಗತ ಕ್ಷೇತ್ರಜ್ಞನಲ್ಲ, ಪರಮ ಕ್ಷೇತ್ರಜ್ಞ. ನಾನು ಪರಮಾತ್ಮನಾಗಿ ಪ್ರತಿಯೊಂದು ದೇಹದಲ್ಲಿಯೂ ಇದ್ದೇನೆ'' ಎಂದು ಹೇಳುತ್ತಾನೆ. ಭಗವದ್ಗೀತೆಯಲ್ಲಿ ನಿರೂಪಿಸಿರುವಂತೆ ಕ್ಷೇತ್ರ ಮತ್ತು ಕ್ಷೇತ್ರಜ್ಞರ ವಿಷಯವನ್ನು ಬಹು ಸೂಕ್ಷ್ಮವಾಗಿ ಅಧ್ಯಯನ ಮಾಡಿದವನ...