Bengaluru, ಏಪ್ರಿಲ್ 22 -- ಅರ್ಥ: ದೇವೋತ್ತಮ ಪರಮ ಪುರುಷನು ಹೀಗೆಂದನು - ಯಾರು ನನ್ನ ಸಾಕಾರ ರೂಪದಲ್ಲಿ ತಮ್ಮ ಮನಸ್ಸನ್ನು ನಿಲ್ಲಿಸುತ್ತಾರೋ ಮತ್ತು ಅಧಿಕವಾದ ಹಾಗೂ ಅಲೌಕಿಕವಾದ ನಿಷ್ಠೆಯಿಂದ ನನ್ನನ್ನು ಪೂಜಿಸುವುದರಲ್ಲಿ ನಿರತರಾಗಿರುತ್ತಾರೋ ಅವರನ್ನು ನಾನು ಅತ್ಯಂತ ಪರಿಪೂರ್ಣರು ಎಂದು ಭಾವಿಸುತ್ತೇನೆ.

ಭಾವಾರ್ಥ: ಅರ್ಜುನನ ಪ್ರಶ್ನೆಗೆ ಉತ್ತರವಾಗಿ ಕೃಷ್ಣನು ಈ ಮಾತನ್ನು ಸ್ಪಷ್ಟವಾಗಿ ಹೇಳುತ್ತಾನೆ ಯಾವಾತನು ಕೃಷ್ಣನ ಸಾಕಾರ ರೂಪದಲ್ಲಿ ತನ್ನ ಮನಸ್ಸನ್ನು ಕೇಂದ್ರೀಕರಿಸುತ್ತಾನೋ ಮತ್ತು ಶ್ರದ್ಧಾಭಕ್ತಿಗಳಿಂದ ಆತನನ್ನು ಪೂಜಿಸುತ್ತಾನೋ ಅವನೇ ಯೋಗದಲ್ಲಿ ಅತ್ಯಂತ ಪರಿಪೂರ್ಣನು ಎಂದು ಪರಿಗಣಿಸಬೇಕು. ಇಂತಹ ಕೃಷ್ಣಪ್ರಜ್ಞೆಯ ಸ್ಥಿತಿಯಲ್ಲಿರುವವನಿಗೆ ಐಹಿಕ ಚಟುವಟಿಕೆಗಳೇ ಇಲ್ಲ; ಏಕೆಂದರೆ ಅವನು ಮಾಡುವುದೆಲ್ಲ ಕೃಷ್ಣನಿಗಾಗಿ. ಪರಿಶುದ್ಧ ಭಕ್ತನು ಸದಾ ಕೆಲಸದಲ್ಲಿ ನಿರತನಾಗಿರುತ್ತಾನೆ. ಕೆಲವೊಮ್ಮೆ ಅವನು ಸಂಕೀರ್ತನ ಮಾಡುತ್ತಾನೆ, ಕೃಷ್ಣನ ವಿಷಯ ಕೇಳುತ್ತಾನೆ ಅಥವಾ ಪುಸ್ತಕಗಳನ್ನು ಓದುತ್ತಾನೆ. ಕೆಲವೊಮ್ಮೆ ನೈವೇದ್ಯಕ್ಕಾಗಿ ಅಡ...