ಭಾರತ, ಜನವರಿ 26 -- ಇತ್ತೀಚಿನ ದಿನಗಳಲ್ಲಿ ಅನೇಕ ಮಂದಿ ಪ್ರತಿನಿತ್ಯ ಸುಗಂಧ ದ್ರವ್ಯದ ಬಳಸುತ್ತಾರೆ. ಮನೆಯಿಂದ ಹೊರಗೆ ಕಾಲಿಡುವಾಗ ಸುಗಂಧ ದ್ರವ್ಯವನ್ನು ಸ್ಪ್ರೇ ಮಾಡದೇ ಆಚೆ ಹೋಗುವುದಿಲ್ಲ. ಬೆಳಗ್ಗೆ ಕಚೇರಿ ಅಥವಾ ಯಾವುದೇ ಕಾರ್ಯಕ್ರಮಕ್ಕೆ ಹೋಗಿ ಸಂಜೆ ಮನೆಗೆ ತಲುಪುವವರೆಗೂ ಅದೇ ಭಾವನೆ ಮತ್ತು ತಾಜಾತನ ಇರಬೇಕು ಎಂಬುದಾಗಿ ಕೆಲವರು ಭಾವಿಸುತ್ತಾರೆ. ಹೀಗಾಗಿ ಮಾರುಕಟ್ಟೆಯಲ್ಲಿ ಅನೇಕ ಬ್ರ್ಯಾಂಡ್‌ಗಳು ಲಭ್ಯವಿದೆ. ಬೆವರಿನ ವಾಸನೆ ಹೋಗಲಾಡಿಸಲು ಸುಗಂಧ ದ್ರವ್ಯವನ್ನು ಬಳಸಲಾಗುತ್ತದೆ. ಆದರೆ, ಸುಗಂಧ ದ್ರವ್ಯವು ಕೆಲವೊಮ್ಮೆ ನಿಮ್ಮ ಆರೋಗ್ಯಕ್ಕೆ ಅಪಾಯವನ್ನುಂಟು ಮಾಡಬಹುದು. ಅನೇಕ ಕಂಪನಿಗಳು ಸುಗಂಧ ದ್ರವ್ಯವನ್ನು ತಯಾರಿಸಲು ಮತ್ತು ಅದರ ಸುವಾಸನೆಯನ್ನು ದೀರ್ಘಕಾಲದವರೆಗೆ ಉಳಿಸಿಕೊಳ್ಳಲು ವಿವಿಧ ರಾಸಾಯನಿಕಗಳನ್ನು ಬಳಸುತ್ತವೆ. ಹೀಗಾಗಿ ಇದು ಆರೋಗ್ಯಕ್ಕೆ ಅಪಾಯವನ್ನುಂಟು ಮಾಡಬಹುದು. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

ಸುಗಂಧ ದ್ರವ್ಯದಲ್ಲಿ ಬಳಸುವ ರಾಸಾಯನಿಕಗಳು ಹಾರ್ಮೋನುಗಳ ಅಸಮತೋಲನಕ್ಕೆ ಕಾರಣವಾಗುತ್ತವೆ. ಇದು ಚರ್ಮದ...