ಭಾರತ, ಜನವರಿ 27 -- ನಮ್ಮ ಜೀವನಶೈಲಿ ಚೆನ್ನಾಗಿರಬೇಕು ಅಂದ್ರೆ ನಾವು ದೈಹಿಕವಾಗಿ ಒಂದಿಷ್ಟು ಚಟುವಟಿಕೆಗಳನ್ನು ಮಾಡಬೇಕು. ಆರೋಗ್ಯಕರ ಆಹಾರ ಸೇವನೆಯ ಜೊತೆಗೆ ಪ್ರತಿನಿತ್ಯ ವ್ಯಾಯಾಮ ಮಾಡುವ ಅಭ್ಯಾಸವನ್ನೂ ರೂಢಿಸಿಕೊಂಡಿರಬೇಕು. ಇತ್ತೀಚೆಗೆ ಹಲವರು ಪ್ರತಿದಿನ ವ್ಯಾಯಾಮ ಮಾಡುತ್ತಾರೆ. ಆದರೆ ವ್ಯಾಯಾಮ ಮಾಡುವಾಗ ಏನು ಮಾಡಬೇಕು, ಏನು ಮಾಡಬಾರದು ಎಂಬುದು ನಮಗೆ ತಿಳಿದಿರಬೇಕು. ಇಲ್ಲದಿದ್ದರೆ ನಾವು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅಂತಹ ಸಮಸ್ಯೆಗಳಲ್ಲಿ ಬೇಗ ವಯಸ್ಸಾದಂತೆ ಕಾಣುವುದು ಒಂದು. ವ್ಯಾಯಾಮದ ದಿನಚರಿಯಲ್ಲಿ ಪದೇ ಪದೇ ಈ ತಪ್ಪುಗಳನ್ನು ಮಾಡುವುದರಿಂದ ನಮಗೆ ಬೇಗ ವಯಸ್ಸಾದಂತೆ ಕಾಣುತ್ತದೆ. ಹಾಗಾದರೆ ಅಂತಹ ತಪ್ಪುಗಳು ಯಾವುವು ಎಂಬುದನ್ನು ನೋಡೋಣ.

ವ್ಯಾಯಾಮ ಮಾಡುವಾಗ ಹೆಚ್ಚಿನವರು ಏಕತಾನತೆಯನ್ನು ಹೊಂದಿರುತ್ತಾರೆ. ದೇಹಕ್ಕೆ ವಿಶ್ರಾಂತಿ ನೀಡದೆ ದೇಹ ದಂಡಿಸುತ್ತಾರೆ. ಆದರೆ ಈ ರೀತಿ ಮಾಡುವುದು ತಪ್ಪು. ನಿರಂತರ ವ್ಯಾಯಾಮವು ದೇಹದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ದೇಹದಲ್ಲಿ ದೀರ್ಘಕಾಲದ ಉರಿಯೂತ, ಹೆಚ್...