ಭಾರತ, ಏಪ್ರಿಲ್ 3 -- Manada Matu Column: "ಮೂಡುವನು ರವಿ ಮೂಡುವನು, ಕತ್ತಲೊಡನೆ ಜಗಳಾಡುವನು, ಮೂಡಣ ರಂಗಸ್ಥಳದಲಿ ನೆತ್ತರ ಮಾಡುವನು ಕುಣಿದಾಡುವನು."

"ಚಿಲಿಪಿಲಿ ಹಾಡನು ಹಾಡಿಸಿ ಹಕ್ಕಿಯ ಗೂಡಿನ ಹೊರ ಹೊರ ದೂಡುವನು."

"ಮಲಗಿದ ಕೂಸಿನ ನಿದ್ದೆಯ ಕಸವನು ಗುಡಿಸುವನು ಕಣ್ ಬಿಡಿಸುವನು."

ಹೀಗೆ ಕವಿ ಪಂಜೆ ಮಂಗೇಶರಾಯರವರು ಸೂರ್ಯೋದಯದ ಸಮಯವನ್ನು ಈ ಪದ್ಯದಲ್ಲಿ ಬಣ್ಣಿಸಿದ್ದಾರೆ. ಪ್ರತಿ ಮುಂಜಾನೆ ರವಿ ಕರ್ತವ್ಯ ಬದ್ಧನಾಗಿ, ಹುಮಸ್ಸು ಮತ್ತು ತರಾತುರಿಯಿಂದ ಕತ್ತಲೊಡನೆ ಜಗಳವಾಡಿಕೊಂಡು ಮುನ್ನುಗ್ಗಿ ಉದಯಿಸುತ್ತಾನೆ. ಉದಯವಾದ ಕ್ಷಣವೇ ಗೂಡಿನಲ್ಲಿರುವ ಪಕ್ಷಿಗಳನ್ನು ಹೊರದೂಡಿ ಚಿಲಿಪಿಲಿ ಹಾಡಿಸುವನು. ಮಲಗಿದ ಕಂದಮ್ಮಗಳ ಕಣ್ಣು ತೆರೆದು ನಗಿಸುವನು. ಹೀಗೆ ಪ್ರತಿಯೊಂದು ಜೀವಿಗಳಿಗೂ ಚಾಲನೆ ನೀಡಿ ಸಂಭ್ರಮಿಸುತ್ತಾನೆ. ಈ ಸಡಗರ ಸಂಭ್ರಮಕ್ಕೆ ಯಾವುದೋ ಒಂದು ವಿಶೇಷ ದಿನ ಮಾತ್ರ ಸೀಮಿತವಲ್ಲ, ಆದರೆ ವರ್ಷದ ಪ್ರತಿಯೊಂದು ದಿನವೂ ಕೂಡ ಈ ಉದಯ ನಿರಂತರ. ಯಾವುದೇ ನೆಪವಿಲ್ಲದೇ ಒಂದೇ ತಪ್ಪಸ್ಸು ಅದೇ ಸೂರ್ಯೋದಯ.

ಹಾಗಾದರೆ, ಈ ರವಿಯ ಮೂಡ...