ಭಾರತ, ಜನವರಿ 31 -- ಪ್ರಾಚೀನ ಕಾಲದಿಂದಲೂ ಭಾರತದಲ್ಲಿ ಓಮ ಅಥವಾ ಅಜ್ವಾನದ ಬಳಕೆ ರೂಢಿಯಲ್ಲಿತ್ತು. ಉಪ್ಪಿನಕಾಯಿ ತಯಾರಿಸಲು ಸಾಮಾನ್ಯವಾಗಿ ಓಮ ಬಳಸಿಯೇ ಬಳಸುತ್ತಿದ್ದರು. ಇದು ಒಂದು ರೀತಿಯ ಪರಿಮಳ ನೀಡುವ ಜೊತೆಗೆ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನೂ ಹೊಂದಿದೆ. ಆಯುರ್ವೇದದಲ್ಲೂ ಓಮಕ್ಕೆ ವಿಶೇಷ ಪ್ರಾಧಾನ್ಯ ನೀಡಲಾಗುತ್ತದೆ. ಪ್ರತಿದಿನ ಓಮ ತಿನ್ನುವುದರಿಂದ ದೇಹಾರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳು ಸಿಗುತ್ತವೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಆಸಿಡಿಟಿ ನಿವಾರಣೆಗೂ ಅಜ್ವಾನ ಮದ್ದು. ಇದು ದೇಹದ ಚಯಾಪಚಯ ಕ್ರಿಯೆಯನ್ನು ಉತ್ತೇಜಿಸುತ್ತದೆ. ಉಸಿರಾಟದ ತೊಂದರೆಗಳನ್ನು ನಿವಾರಿಸುವ ಜೊತೆಗೆ ಒಟ್ಟಾರೆ ಆರೋಗ್ಯವನ್ನು ಸುಧಾರಿಸುತ್ತದೆ.

ಪ್ರತಿದಿನ ಅರ್ಧ ಚಮಚ ಓಮ ತಿನ್ನುವುದರಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ನೋಡೋಣ.

ಓಮ ಉಸಿರಾಟವನ್ನು ತಾಜಾಗೊಳಿಸುತ್ತದೆ. ಇದು ಉರಿಯೂತವನ್ನು ಕಡಿಮೆ ಮಾಡುತ್ತದೆ. ಒಸಡಿನ ಸೋಂಕನ್ನು ಗುಣಪಡಿಸುತ್ತದೆ. ಹಲ್ಲುನೋವನ್ನು ನಿವಾರಿಸುತ್ತದೆ. ಬಾಯಿಯ ಸೋಂಕನ್ನು ಸಹ ತಡ...