Bengaluru, ಫೆಬ್ರವರಿ 25 -- Adarsha Dampathigalu Show: ಕನ್ನಡ ಕಿರುತೆರೆಯಲ್ಲಿ ಸೀರಿಯಲ್‌ಗಳಷ್ಟೇ ಸಾಕಷ್ಟು ರಿಯಾಲಿಟಿ ಶೋಗಳೂ ಹೆಸರು ಮಾಡಿವೆ. ಹಳೇ ಸೀರಿಯಲ್‌ಗಳು, ಶೋಗಳು ಇಂದಿಗೂ ವೀಕ್ಷಕರ ನೆನಪಿನಲ್ಲಿ ಉಳಿದಿವೆ ಎಂದರೆ, ಅವು ಮೂಡಿಸಿದ ಛಾಪು ಹೇಗಿರಬೇಡ. ಇದೀಗ ದಶಕಗಳ ಕಾಲ ಮನೆ ಮಂದಿಯನ್ನಷ್ಟೇ ಅಲ್ಲದೆ, ಮಕ್ಕಳನ್ನೂ ರಂಜಿಸಿದ್ದ ಆದರ್ಶ ದಂಪತಿಗಳು ಶೋ ಮತ್ತೆ ಕಿರುತೆರೆ ಮೇಲೆ ಸದ್ದು ಮಾಡಲು ಬರುತ್ತಿದೆ. ಪ್ರಣಯರಾಜ ಶ್ರೀನಾಥ್‌ ಆದರ್ಶ ದಂಪತಿಗಳು ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದರು. ಇದೀಗ ಇದೇ ಶೋ ಹೊಸತನದ ಜತೆಗೆ ಮತ್ತೆ ಆಗಮಿಸುತ್ತಿದೆ.

ಉದಯ ಟಿವಿಯಲ್ಲಿ ದಶಕಗಳ ಕಾಲ "ಆದರ್ಶ ದಂಪತಿಗಳು" ಶೋ ಮನರಂಜನೆ ನೀಡಿತ್ತು. ಹತ್ತಾರು ಜೋಡಿಗಳಲ್ಲಿ ಗೆದ್ದ ಒಂದು ಜೋಡಿಗೆ ಆದರ್ಶ ದಂಪತಿ ಪಟ್ಟ ನೀಡಲಾಗುತ್ತಿತ್ತು. ಜೋಡಿ ಜೀವಗಳಿಗೆ ಬಗೆಬಗೆ ಆಟ, ಪಾಠದ ಜತೆಗೆ ಸರ್ಪ್ರೈಸ್‌ ಉಡುಗೊರೆಗಳನ್ನೂ ನೀಡಿ ಪ್ರೋತ್ಸಾಹಿಸಿತ್ತು ಈ ಕಾರ್ಯಕ್ರಮ. ಹೀಗೆ ಸಾಗಿದ ಶೋ ಕೇವಲ ಬೆಂಗಳೂರಿಗೆ ಸೀಮಿತವಾಗದೆ, ರಾಜ್ಯದ ವಿವಿದೆಡೆಗಳಲ್ಲಿ ನಡೆದಿ...