Bangalore, ಮೇ 12 -- ಬೆಂಗಳೂರು: ಹಾಸನ ಮಾಜಿ ಲೋಕಸಭಾ ಸದಸ್ಯ ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರ ಪುತ್ರ ಪ್ರಜ್ವಲ್‌ ರೇವಣ್ಣ ಎದುರಿಸುತ್ತಿರುವ ಎರಡನೇ ಅತ್ಯಾಚಾರ ಪ್ರಕರಣದ ವಿಚಾರಣೆ ಮೇ 28 ರಿಂದ ಆರಂಭವಾಗಲಿದೆ. ಹಾಸನ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆಯೊಬ್ಬರು ತಮ್ಮ ಕ್ಷೇತ್ರದ ಸಮಸ್ಯೆ ಕುರಿತು ಚರ್ಚಿಸಲು ತೆರಳಿದ್ದಾಗ ಪ್ರಜ್ವಲ್‌ ಅತ್ಯಾಚಾರ ಎಸಗಿದ ಪ್ರಕರಣ ಇದಾಗಿದೆ. 33 ವರ್ಷದ ಪ್ರಜ್ವಲ್‌ ವಿರುದ್ಧದ ಮೊದಲ ಅತ್ಯಾಚಾರ ಪ್ರಕರಣದ ವಿಚಾರಣೆ ವಿಶೇಷ ನ್ಯಾಯಾಲಯದಲ್ಲಿ ಮೇ 2 ರಿಂದ ಆರಂಭವಾಗಿದೆ. ಎರಡನೇ ಅತ್ಯಾಚಾರ ಪ್ರಕರಣದಲ್ಲಿ ಏಪ್ರಿಲ್‌ 22 ರಂದು ಪ್ರಜ್ವಲ್‌ ವಿರುದ್ಧ ದೋಷಾರೋಪ ಹೊರಿಸಲಾಗಿತ್ತು. ಪ್ರಜ್ವಲ್‌ ಈ ಪ್ರಕರಣದಲ್ಲಿ ತಾನು ನಿರಪಾರಾಧಿ ಎಂದು ಮನವಿ ಮಾಡಿಕೊಂಡಿದ್ದರು. ಮೇ 5 ರಂದು ಹೊಸ ವಕೀಲರನ್ನು ನೇಮಿಸಿಕೊಂಡಿದ್ದರು. ವಿಚಾರಣೆಯನ್ನು ಆರಂಭಿಸಲು ಮೇ 28 ರಂದು ಮೇ ಲೈಂಗಿಕ ಕಿರುಕುಳಕ್ಕೊಳಗಾದ ಮಹಿಳೆಯನ್ನೂ ಸೇರಿದಂತೆ ಮೊದಲ ಕಂತಿನ ಸಾಕ್ಷ್ಯಗಳನ್ನು ಹಾಜಪರುಪಡಿಸಲು ಕಳೆದ ವಾರ ನ್ಯಾಯಾಲಯ ಸಮನ್ಸ್‌ ಹೊರಡಿಸಿತ...