ಭಾರತ, ಜೂನ್ 5 -- ನಿನ್ನೆ ರಾತ್ರಿ (ಜೂನ್ 3) ಕೊಹ್ಲಿಯ ಆನಂದ ಭಾಷ್ಪ ನೋಡಿ ಅದೆಷ್ಟೋ ಕ್ರಿಕೆಟ್‌ ಅಭಿಮಾನಿಗಳು ಕಣ್ಣೀರು ಸುರಿಸಿದ್ದರು. ಕೊಹ್ಲಿಯ ಹದಿನೆಂಟು ವರ್ಷದ ಪ್ರಯಾಸಕ್ಕೆ ಸಿಗಬೇಕಿದ್ದ ಫಲವು ತಡವಾಗಿ ಬಂದಿದ್ದನ್ನು ಕೋಟ್ಯಂತರ ಅಭಿಮಾನಿಗಳು ಕಣ್ತುಂಬಿಕೊಂಡಿದ್ದರು. ಅದೆಷ್ಟೋ ಅಭಿಮಾನಿಗಳು ರಾತ್ರಿಯಿಂದ ನಿದ್ದೆಯನ್ನೇ ಮಾಡದೇ ಗೆಲುವನ್ನು ಮೆಲುಕು ಹಾಕುತ್ತಿದ್ದರು. ಈ ಅಪರೂಪದ ಗೆಲುವನ್ನು ಅರಗಿಸಿಕೊಳ್ಳಲು ವಾರವೇ ಬೇಕಾಗಬಹುದು ಎಂದು ಕನವರಿಸುತ್ತಿದ್ದರು. ಆದರೆ ಇವೆಲ್ಲ ಖುಷಿಯಲ್ಲಿ ರಾಜಕೀಯ ಬೇಳೆಯನ್ನು ಬೇಯಿಸಿಕೊಳ್ಳಲು ಹೊರಟ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್‌ ಎನ್ನುವ ಜೋಡೆತ್ತುಗಳು ಸಂಭ್ರಮದ ಮನೆಗೆ ಸೂತಕವನ್ನು ತಂದಿಟ್ಟರು.

ಆರ್‌ಸಿಬಿಯು ಚೊಚ್ಚಲ ಟ್ರೋಫಿ ಗೆದ್ದಾಗಲೇ ರಾಜ್ಯದ ಹಲವೆಡೆ ಅಭಿಮಾನಿಗಳ ಅತಿರೇಕದ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಹೀಗಿರುವಾಗ ಯಾವುದೇ ಪೂರ್ವ ಸಿದ್ಧತೆಯಿಲ್ಲದೇ ಸಂಭ್ರಮಾಚರಣೆಗೆ ತಯಾರಿಗೆ ರಾಜ್ಯ ಸರ್ಕಾರವೇ ಅತಿಯಾದ ಉತ್ಸಾಹ ತೋರಿದಂತೆ ಕಾಣಿಸುತ್ತಿದೆ. ಆದರೆ ಅದಕ್ಕೆ ಪೂರಕವಾ...