ಭಾರತ, ಏಪ್ರಿಲ್ 27 -- ಭಾರತ ಕಂಡ ಅತ್ಯುನ್ನತ ಕ್ರೀಡಾಪಟುಗಳಲ್ಲಿ ವಿನೇಶ್ ಫೋಗಟ್ ಕೂಡಾ ಒಬ್ಬರು. ಅವರ ಕುಟುಂಬವೇ ತಮ್ಮನ್ನು ಕ್ರೀಡಾಕ್ಷೇತ್ರಕ್ಕೆ ಮುಡಿಪಾಗಿಟ್ಟಿದೆ. ಫೋಗಟ್ ಅವರ ತಂದೆ ರಾಜ್‌ಪಾಲ್ ಫೋಗಟ್ ಮತ್ತು ಅವರ ಸೋದರಸಂಬಂಧಿಗಳಾದ ಗೀತಾ ಫೋಗಟ್ ಮತ್ತು ಬಬಿತಾ ಫೋಗಟ್ ಕೂಡಾ ಕ್ರೀಡಾಪಟುಗಳೇ. ಹಲವು ಕ್ರೀಡಾಕೂಟಗಳಲ್ಲಿ ಪದಕ ಗೆದ್ದಿರುವ ವಿನೀಶ್ ಫೋಗಟ್‌, 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಬಂಗಾರ ಗೆಲ್ಲಲು ಸಾಧ್ಯವಾಗಲಿಲ್ಲ. ಮಹಿಳೆಯರ 50 ಕೆಜಿ ಫ್ರೀಸ್ಟೈಲ್‌ ಕುಸ್ತಿ ವಿಭಾಗದಲ್ಲಿ ಫೈನಲ್‌ ಪ್ರವೇಶಿಸಿದ್ದ ಅವರು, ಅಂತಿಮ ಸುತ್ತಿಗೂ ಮುನ್ನ ಒಲಿಂಪಿಕ್ಸ್‌ನಿಂದ ಅನರ್ಹಗೊಂಡರು. 100 ಗ್ರಾಂ ತೂಕದ ಮಿತಿಯನ್ನು ಮೀರಿದ್ದಕ್ಕಾಗಿ ವಿನೇಶ್ ಅವರನ್ನು ಅನರ್ಹಗೊಳಿಸಲಾಯ್ತು. ಈ ಘಟನೆಯು ಆರಂಭಿಕ ಹಂತದಲ್ಲಿ ಅವರ ವೃತ್ತಿಜೀವನದ ಮೇಲೆ ಕರಿನೆರಳು ಬೀರಿತು. ಆದರೆ, ಅದು ಮುಂದುವರೆಯಲಿಲ್ಲ.

ಫೋಗಟ್‌ ಅನರ್ಹತೆಯ ಪ್ರಕರಣವು ರಾಜಕೀಯ ಬಣ್ಣ ಪಡೆದಿದ್ದು ಹೊಸ ವಿಷಯವೇನಲ್ಲ. ಈ ಬಗ್ಗೆ ಪರ-ವಿರೋಧದ ಮಾತೇ ಮುನ್ನೆಲೆಗೆ ಬಂದವು. ರಾಜಕೀಯದ ...