ಭಾರತ, ಮೇ 19 -- ಬೆಂಗಳೂರು: ಆಸ್ತಿ ಖರೀದಿ ಮತ್ತು ಮಾರಾಟದ ನೋಂದಣಿಗೆ ಪ್ಯಾನ್ ಸಂಖ್ಯೆ ನಮೂದಿಸುವುದು ಕಡ್ಡಾಯವಾಗಿದ್ದು, ಅದಿಲ್ಲದೇ ನೋಂದಣಿ ನಡೆಯದು. ಹೌದು, ಈಗಾಗಲೇ ಇದು ಚಾಲ್ತಿಯಲ್ಲಿದ್ದರೂ, ಇದನ್ನು ಸರ್ಕಾರ ಮತ್ತೊಮ್ಮೆ ದೃಢೀಕರಿಸಿದ್ದು ಹೊಸ ಸುತ್ತೂಲೆ ಮೂಲಕ ನೆನಪಿಸಿದೆ. ಈ ಸಂಬಂಧ ನೋಂದಣಿ ಪರಿವೀಕ್ಷಕ ಮತ್ತು ಮುದ್ರಾಂಕ ಆಯುಕ್ತರು ಮೇ 16ರಂದು ಎಲ್ಲ ಜಿಲ್ಲಾ ನೋಂದಣಾಧಿಕಾರಿಗಳು ಮತ್ತು ಉಪ ನೋಂದಣಾಧಿಕಾರಿ ಕಚೇರಿಗಳಿಗೆ ಈ ಸಂಬಂಧ ಸುತ್ತೋಲೆ ಕಳುಹಿಸಿದ್ದಾರೆ.

ಸುತ್ತೋಲೆ ಪ್ರಕಾರ, 30 ಲಕ್ಷ ರೂಪಾಯಿ ಮತ್ತು ಅದಕ್ಕಿಂತ ಹೆಚ್ಚಿನ ಮೌಲ್ಯದ ಆಸ್ತಿ ಖರೀದಿ ನೋಂದಣಿಯ ವೇಳೆ ಮಾರಾಟಗಾರರು ಮತ್ತು ಖರೀದಿದಾರರು ಪ್ಯಾನ್‌ ವಿವರ ಸಲ್ಲಿಸುವುದು ಕಡ್ಡಾಯ. ಪ್ಯಾನ್‌ ಸಲ್ಲಿಸದೇ ಇದ್ದರೆ ಆಸ್ತಿ ನೋಂದಣಿ ಆಗುವುದಿಲ್ಲ ಎಂದು ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಸುತ್ತೋಲೆಯಲ್ಲಿ ಸ್ಪಷ್ಟಪಡಿಸಿದೆ.

1) ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಿ: 30 ಲಕ್ಷ ರೂಪಾಯಿ ಮತ್ತು ಅದಕ್ಕಿಂತ ಹೆಚ್ಚಿನ ಮೌಲ್ಯದ ಆಸ್ತಿ ನೋಂದಣಿಗೆ ಸಂಬಂಧಿ...