ಭಾರತ, ಮಾರ್ಚ್ 19 -- Actor Shashikumar about Pan india: ಸ್ಯಾಂಡಲ್‌ವುಡ್‌ನ ಹಿರಿಯ ನಟ ಸುಪ್ರಿಂ ಹೀರೋ ಶಶಿಕುಮಾರ್‌, ಸದ್ಯ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಆ ಪೈಕಿ ಆ ಲಿಸ್ಟ್‌ಗೆ ಹೊಸ ಸೇರ್ಪಡೆ, "Congratulations ಬ್ರದರ್". ಬಹುತೇಕ ಶೂಟಿಂಗ್‌ ಮುಗಿಸಿಕೊಂಡಿರುವ ಈ ಸಿನಿಮಾದಲ್ಲಿ ನಾಯಕನ ತಂದೆಯಾಗಿ ಶಶಿಕುಮಾರ್‌ ನಟಿಸಿದ್ದಾರೆ. ಈ ಸಿನಿಮಾತಂಡ ಚಿತ್ರೀಕರಣ ಮುಗಿದ ಬಗ್ಗೆ ಮಾಧ್ಯಮಗಳ ಜತೆಗೆ ಮಾಹಿತಿ ಹಂಚಿಕೊಂಡಿತು. ಈ ವೇಳೆ, ಪ್ಯಾನ್‌ ಇಂಡಿಯಾ ಪರಿಕಲ್ಪನೆ ಸೇರಿ ಹಲವು ವಿಚಾರಗಳ ಬಗ್ಗೆ ಶಶಿಕುಮಾರ್‌ ಮಾತನಾಡಿದ್ದಾರೆ.

"ಈಗಿನವರು ಎಲ್ಲರೂ ಪ್ಯಾನ್‌ ಇಂಡಿಯಾ.. ಪ್ಯಾನ್‌ ಇಂಡಿಯಾ ಅಂತ ಅದರ ಹಿಂದೆಯೇ ಹೋಗ್ತಿದ್ದಾರೆ. ಮೊದಲು ಅದರ ಹಿಂದೆ ಓಡುವುದನ್ನು ನಿಲ್ಲಿಸಿ. ಪ್ಯಾನ್‌ ಇಂಡಿಯಾ ಅಂತ ಮಾಡಿದ ಬೇಜಾನ್‌ ಸಿನಿಮಾಗಳು ಪ್ಲಾಪ್‌ ಆದ ಉದಾಹರಣೆ ಇದೆ. ಪ್ಯಾನ್‌ ಇಂಡಿಯಾ ಮಾಡಿದ ಸಿನಿಮಾಗಳೆಲ್ಲವೂ ಸಕ್ಸಸ್‌ ಆಗಿದ್ದಾವಾ? ಬೆರಳೆಣಿಕೆಯಲ್ಲಿ ಮಾತ್ರ ಆ ಸಕ್ಸಸ್‌ ಕಾಣಿಸುತ್ತೆ. ಸಿನಿಮಾ ಸ್ಕ್ರಿಪ್ಟ್‌ ಸಲುವಾಗಿ ನೀವ...