ಭಾರತ, ಏಪ್ರಿಲ್ 21 -- ರೋಮನ್ ಕ್ಯಾಥೋಲಿಕ್ ಚರ್ಚ್‌ನ ಪೋಪ್‌ ಫ್ರಾನ್ಸಿಸ್ ಅವರು ಸೋಮವಾರ ಬೆಳಿಗ್ಗೆ ನಿಧನರಾಗಿದ್ದು, ಅವರ ಕೊನೆಯ ಈಸ್ಟರ್ ಆಚರಣೆ ಮತ್ತು ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ನಿಯೋಗ ಭೇಟಿಯ ಸಂದರ್ಭದ ಕೆಲವು ಫೋಟೋಸ್ ಇಲ್ಲಿವೆ.

ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ನಿಯೋಗ ಪೋಪ್ ಫ್ರಾನ್ಸಿಸ್ ಅವರನ್ನು ಈಸ್ಟರ್ ಸಂಡೇ ದಿನ ಭೇಟಿ ಮಾಡಿ ಉಭಯ ಕುಶಲೋಪರಿ ನಡೆಸಿದರು.

ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್‌ ಜತೆಗೆ ಮಾತುಕತೆ ನಡೆಸುತ್ತ ಡೊನಾಲ್ಡ್ ಟ್ರಂಪ್ ಅವರ ವಲಸಿಗರ ನೀತಿ ವಿಚಾರದಲ್ಲಿ ಪೋಪ್ ಫ್ರಾನ್ಸಿಸ್ ಅವರು ಬಹಿರಂಗವಾಗಿಯೆ ಟೀಕೆ ಮಾಡಿದ್ದರು. ಅಮೆರಿಕದ ನೀತಿಗಳ ಕುರಿತು ಸ್ವಲ್ಪ ಹೊತ್ತು ಇಬ್ಬರೂ ಮಾತುಕತೆ ನಡೆಸಿದರು ಎಂದು ಚರ್ಚ್‌ನ ಮೂಲಗಳು ತಿಳಿಸಿವೆ.

ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರು 2019ರಲ್ಲಿ ರೋಮನ್ ಕ್ಯಾಥೋಲಿಕ್ ಆಗಿ ಬದಲಾಗಿದ್ದರು. ಈ ಭೇಟಿಯ ವೇಳೆ ಅವರು ವ್ಯಾಟಿಕನ್ ಅಧಿಕೃತರ ಜತೆಗೆ ವಲಸೆ ಮತ್ತು ಜಾಗತಿಕ ಬಿಕ್ಕಟ್ಟುಗಳ ಕುರಿತು ಮಾತುಕತೆ ನಡೆಸಿದರು ಎಂದು ವ್ಯಾಟಿಕನ್ ಮಾಧ್...