ಭಾರತ, ಏಪ್ರಿಲ್ 21 -- ಪೋಪ್ ಫ್ರಾನ್ಸಿಸ್ ನಿಧನ: ರೋಮನ್ ಕ್ಯಾಥೋಲಿಕ್ ಚರ್ಚ್‌ನ ಮೊದಲ ಲ್ಯಾಟಿನ್ ಅಮೆರಿಕನ್ ನಾಯಕ, ಪೋಪ್ ಫ್ರಾನ್ಸಿಸ್‌ ವಿಧಿವಶರಾದರು. ಅವರಿಗೆ 88 ವರ್ಷ ವಯಸ್ಸಾಗಿತ್ತು. ನಿಧನವಾರ್ತೆಯನ್ನು ವ್ಯಾಟಿಕನ್ ವಿಡಿಯೋ ಸಂದೇಶ ಮೂಲಕ ದೃಢೀಕರಿಸಿದೆ. ಪೋಪ್ ಫ್ರಾನ್ಸಿಸ್ ಅವರು ಕಳೆದ 12 ವರ್ಷಗಳಿಂದ ವಯೋ ಸಹಜ ಕಾಯಿಲೆಗಳಿಂದ ಬಳಲಿದ್ದರು. ರೋಮ್‌ನ ಬಿಷಪ್‌ ಫ್ರಾನ್ಸಿಸ್‌ ಅವರು ಇಂದು ಬೆಳಿಗ್ಗೆ 7.35ಕ್ಕೆ ನಿಧನರಾಗಿರುವುದಾಗಿ ಕಾರ್ಡಿನಲ್ ಕೆವಿನ್ ಫಾರೆಲ್‌ ವಿಡಿಯೋ ಸಂದೇಶ ಹಾಕಿದ್ದಾರೆ.

ವ್ಯಾಟಿಕನ್‌ನ ಓಪನ್-ಏರ್ ಈಸ್ಟರ್ ಸಂಡೇ ಮಾಸ್‌ಗಾಗಿ ಸೇಂಟ್ ಪೀಟರ್ಸ್ ಸ್ಕ್ವೇರ್‌ನಲ್ಲಿ ಸಾವಿರಾರು ಕ್ಯಾಥೊಲಿಕ್ ಯಾತ್ರಾರ್ಥಿಗಳು ಒಟ್ಟುಗೂಡಿದ ಸಂದರ್ಭದಲ್ಲಿ ಅವರಿಗೆ ಹ್ಯಾಪಿ ಈಸ್ಟರ್‌ ಎಂದು ಶುಭಕೋರಿದ ಮಾರನೇ ದಿನವೇ ಅವರು ವಿಧಿವಶರಾದರು.

(ಮಾಹಿತಿ ಅಪ್ಡೇಟ್ ಆಗುತ್ತಿದೆ)

Published by HT Digital Content Services with permission from HT Kannada....