ಭಾರತ, ಏಪ್ರಿಲ್ 21 -- ಪೋಪ್ ಫ್ರಾನ್ಸಿಸ್‌ ಉತ್ತರಾಧಿಕಾರಿ; ಈಸ್ಟರ್ ಸಂಡೇ ಮಾರನೇ ದಿನವಾದ ಇಂದು (ಏಪ್ರಿಲ್ 21) ಬೆಳಿಗ್ಗೆ ಪೋಪ್ ಫ್ರಾನ್ಸಿಸ್ ನಿಧನರಾದರು. ವ್ಯಾಟಿಕನ್ ಕ್ಯಾಮೆರ್‌ಲೆಂಗೊದ ಕಾರ್ಡಿನಲ್ ಕೆವಿನ್ ಫ್ಯಾರೆಲ್‌ ಈ ವಿಷಯವನ್ನು ದೃಢೀಕರಿಸಿದ್ದು, ಪೋಪ್ ಫ್ರಾನ್ಸಿಸ್ ಅವರು ನ್ಯುಮೋನಿಯಾದಿಂದ ಎದುರಾದ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ಹೇಳಿದ್ದಾರೆ. ಪೋಪ್ ಫ್ರಾನ್ಸಿಸ್ ಅವರ ನಿಧನದೊಂದಿಗೆ ಅವರ ಉತ್ತರಾಧಿಕಾರಿ ಯಾರು ಎಂಬ ಕುತೂಹಲವೂ ಹೆಚ್ಚಾಗಿದೆ. ಪ್ರೀತಿಯ ಸೋದರ, ಸೋದರಿಯರೇ, ನಮೆಲ್ಲರ ಪ್ರೀತಿಯ ರೋಮ್‌ನ ಬಿಷಪ್‌ ಹೋಲಿ ಫಾದರ್ ಫ್ರಾನ್ಸಿಸ್ ಅವರು ಇಂದು ಬೆಳಿಗ್ಗೆ 7.35ಕ್ಕೆ ಕ್ರಿಸ್ತನ ಪಾದ ಸೇರಿದರು ಎಂದು ಕಾರ್ಡಿನೆಲ್ ಕೆವಿನ್ ಫ್ಯಾರೆಲ್ ವಿಡಿಯೋ ಸಂದೇಶದಲ್ಲಿ ತಿಳಿಸಿದ್ದರು.

ಪೋಪ್ ಫ್ರಾನ್ಸಿಸ್ ಅವರು ವಿಧಿವಶರಾಗಿದ್ದು, ಅವರ ಅಂತ್ಯ ಸಂಸ್ಕಾರಕ್ಕೆ ವ್ಯಾಟಿಕನ್‌ನಲ್ಲಿ ಸಿದ್ದತೆ ನಡೆದಿದೆ. ಈ ನಡುವೆ, ಮುಂದಿನ ಪೋಪ್ ಯಾರು? ಎಂಬ ಕುತೂಹಲ ಹೆಚ್ಚಾಗಿದೆ. ಪೋಪ್ ಫ್ರಾನ್ಸಿಸ್ ಅವರ ಉತ್ತರಾಧಿಕಾರಿಗಳ ...