Delhi, ಏಪ್ರಿಲ್ 22 -- ಆಕೆ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಪೊಲೀಸ್‌ ಇಲಾಖೆಯಲ್ಲಿ ಅಧಿಕಾರಿಯಾಗಿರುವವರೊಬ್ಬರ ಪುತ್ರಿ. ಮನೆಗೆ ಅಪ್ಪ ಬರುವ ಜೀಪು, ಅವರಿಗೆ ಸಿಗುತ್ತಿದ್ದ ಗೌರವ ನೋಡಿ ನಾನೂ ಅಧಿಕಾರಿಯಾಗಬೇಕು. ಭಾರತದ ಅತ್ಯುನ್ನತ ಪರೀಕ್ಷೆ ಎನ್ನಿಸಿರುವ ಕೇಂದ್ರ ಲೋಕಸೇವಾ ಆಯೋಗದ 2024ನೇ ಸಾಲಿನ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು. ಭಾರತದ ಸೇವೆ ಮಾಡಬೇಕು ಎಂದು ಸಣ್ಣ ವಯಸ್ಸಿನಲ್ಲಿಯೇ ಕನಸು ಕಂಡರು. ಹಾಗೆ ಕಂಡ ಕನಸನ್ನು ಸಾಕಾರಗೊಳಿಸಿಕೊಳ್ಳಲು ನಿರಂತರವಾಗಿ ಅಭ್ಯಾಸ ಮಾಡಿದರು. ನಿದ್ದೆಗಳಿಲ್ಲದ ಅದೆಷ್ಟೋ ರಾತ್ರಿಗಳು. ಅವರ ಮುಂದೆ ಇದ್ದುದು ಐಎಎಸ್‌ ಇಲ್ಲವೇ ಐಪಿಎಸ್‌ ಅಧಿಕಾರಿಯಾಗಬೇಕೆಂಬ ಹಂಬಲ. ಅದನ್ನು ಈ ದಿನ ಈಡೇರಿಸಿಕೊಂಡರು. ಆಯೋಗ ಪ್ರಕಟಿಸಿದ 2024 ಸಾಲಿನ ಪರೀಕ್ಷೆಗಳ ಫಲಿತಾಂಶದಲ್ಲ ಇಡೀ ದೇಶಕ್ಕೆ ನಂಬರ್‌ ಒನ್‌ ಎನ್ನಿಸಿದರು.

ಆ ಯುವತಿಯ ಹೆಸರು ಶಕ್ತಿ ದುಬೆ. ಉತ್ತರ ಪ್ರದೇಶದ ಸಾಮಾನ್ಯ ಕುಟುಂಬದಲ್ಲಿಯೇ ಜನಿಸಿ ಇದ್ದ ಅವಕಾಶಗಳನ್ನು ಬಳಸಿಕೊಂಡು ಯುಪಿಎಸ್ಸಿ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರೈಸಿ ಕನಸು ನ...