Bengaluru, ಏಪ್ರಿಲ್ 22 -- ಪೆರು ರಾಜಧಾನಿ ಲಿಮಾದಲ್ಲಿ ನಡೆದ ಶೂಟಿಂಗ್ ವಿಶ್ವಕಪ್‌ನಲ್ಲಿ (Shooting World Cup) ಭಾರತ ಮೂರನೇ ಸ್ಥಾನ ಪಡೆದಿದೆ. ಟ್ರ್ಯಾಪ್ ಮಿಶ್ರ ತಂಡ ಸ್ಪರ್ಧೆಯಲ್ಲಿ ಪೃಥ್ವಿರಾಜ್ ತೊಂಡೈಮನ್ ಮತ್ತು ಪ್ರಗತಿ ದುಬೆ ಜೋಡಿ ಪದಕ ಸುತ್ತನ್ನು ತಲುಪಲು ವಿಫಲವಾದರು. ಅಂತಿಮ ದಿನದಾಟದಲ್ಲಿ ನಿರೀಕ್ಷಿತ ಫಲಿತಾಂಶ ಬರಲಿಲ್ಲ. ಹೀಗಾಗಿ ಭಾರತೀಯ ಶೂಟರ್‌ಗಳು ಐಎಸ್ಎಸ್ಎಫ್ ವಿಶ್ವಕಪ್‌ನಲ್ಲಿ ಮೂರನೇ ಸ್ಥಾನ ಪಡೆಯುವುದರೊಂದಿಗೆ ತವರಿಗೆ ಮರಳಿದ್ದಾರೆ.

ಸೋಮವಾರ ನಡೆದ ಮಹಿಳೆಯರ 25 ಮೀಟರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಸಿಮ್ರನ್ಪ್ರೀತ್ ಕೌರ್ ಬ್ರಾರ್ ಭಾರತಕ್ಕೆ ಅಂತಿಮ ಪದಕ ಗೆದ್ದುಕೊಟ್ಟರು. ಇದರೊಂದಿಗೆ ಭಾರತವು ಶೂಟಿಂಗ್‌ ವಿಶ್ವಕಪ್‌ನಲ್ಲಿ ಒಟ್ಟು ಏಳು ಪದಕಗಳನ್ನು ಗೆದ್ದಂತಾಯ್ತು. ಇದರಲ್ಲಿ ಎರಡು ಚಿನ್ನ, ನಾಲ್ಕು ಬೆಳ್ಳಿ ಮತ್ತು ಒಂದು ಕಂಚಿನ ಪದಕ ಸೇರಿವೆ. ದೇಶ ಪದಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.

ಯುಎಸ್ಎ ಕೂಡ ವಿಶ್ವಕಪ್‌ನಲ್ಲಿ ಒಟ್ಟು ಏಳು ಪದಕಗಳನ್ನು ಪಡೆದಿದೆ. ಆದರೆ, ಭಾರತಕ್ಕಿಂತ ಚಿನ್ನದ ಪದಕಗಳ ಸ...