ಭಾರತ, ಏಪ್ರಿಲ್ 6 -- Peddi Movie Glimpse Released: ಟಾಲಿವುಡ್‌ನ ಬಹುನಿರೀಕ್ಷಿತ 'ಪೆದ್ದಿ' ಸಿನಿಮಾದ ಫಸ್ಟ್‌ ಶಾಟ್ ರಿಲೀಸ್ ಆಗಿದೆ. ರಾಮ್‌ಚರಣ್ ನಾಯಕನಾಗಿ ನಟಿಸಿರುವ ಈ ಚಿತ್ರದ ಫಸ್ಟ್ ಶಾಟ್‌ ವಿಡಿಯೊ ಇಂದು ಬಿಡುಗಡೆ ಆಗಿದ್ದು, ನೋಡಿದವರಿಗೆ ಗೂಪ್‌ಬಂಪ್ಸ್ ತರುವಂತಿದೆ ಫಸ್ಟ್‌ಶಾಟ್‌ ವಿಡಿಯೊ. ರಾಮ್‌ಚರಣ್‌ ಡೈಲಾಗ್‌ಗಳು ಹಾಗೂ ಎಆರ್ ರೆಹಮಾನ್ ಮ್ಯೂಸಿಕ್ ಮೂಲಕ ಫಸ್ಟ್ ಶಾಟ್ ವಿಡಿಯೊ ಸಖತ್ ಟ್ರೆಂಡ್ ಸೃಷ್ಟಿಸುತ್ತಿದೆ. ಮೊದಲೇ ಹೇಳಿಕೊಂಡಂತೆ ರಾಮನವಮಿ ಪ್ರಯುಕ್ತ ಚಿತ್ರದ ಮೊದಲ ವಿಡಿಯೊ ರಿಲೀಸ್ ಮಾಡಿದೆ ಚಿತ್ರತಂಡ.

ಇಂದು (ಮಾರ್ಚ್ 6) ಬೆಳಿಗ್ಗೆ ಪೆದ್ದಿ ಸಿನಿಮಾ ಫಸ್ಟ್ ಗ್ಲಿಂಪ್ಸ್ ಬಿಡುಗಡೆಯಾಗಿದ್ದು, ವಿಡಿಯೊ ನೋಡಿದ ಅಭಿಮಾನಿಗಳು ಫಿದಾ ಆಗಿದ್ದಾರೆ. ಈ ವಿಡಿಯೊ ಈಗ ಸಾಕಷ್ಟು ವೈರಲ್ ಆಗುತ್ತಿದೆ, ಮಾತ್ರವಲ್ಲ ಸೋಷಿಯಲ್ ಮಿಡಿಯಾದಲ್ಲಿ ಟ್ರೆಂಡ್ ಸೃಷ್ಟಿಸುತ್ತಿದೆ. ಸುತ್ತಲೂ ಜನರು ನೆರೆದಿರುವ ಮೈದಾನಕ್ಕೆ ರಗಡ್ ಎಂಟ್ರಿ ಕೊಟ್ಟು ಬ್ಯಾಟ್ ಬೀಸುವ ರಾಮ್‌ಚರಣ್‌ ಅವತಾರ ಮೆಗಾ ಅಭಿಮಾನಿಗಳಲ್ಲಿ ಸಿನಿಮಾದ ಮೇಲೆ ನಿರೀ...