Bangalore, ಮೇ 22 -- ಬೆಂಗಳೂರು: ಕರ್ನಾಟಕದಲ್ಲಿ ಪೂರ್ವ ಮುಂಗಾರು ಈ ಬಾರಿ ಬಹುತೇಕ ಜಿಲ್ಲೆಗಳಲ್ಲಿ ಬಂಪರ್‌ ಎನ್ನಿಸಿದೆ. ಅದರಲ್ಲೂ ಮೇ 1 ರಿಂದ ಮೇ 21 ರವರೆಗಿನ ಮೂರು ವಾರಗಳ ಮಳೆ ಮೂರು ಜಿಲ್ಲೆಗಳನ್ನು ಹೊರತುಪಡಿಸಿ 28 ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚೇ ಸುರಿದಿದೆ. ಕೋಲಾರ, ವಿಜಯಪುರ, ಬೆಂಗಳೂರು, ಕಲಬುರಗಿ ಸಹಿತ ಹಲವು ಜಿಲ್ಲೆಗಳಲ್ಲಿ ಮಳೆ ಪ್ರಮಾಣ ಮೂರ್ನಾಲ್ಕು ದಿನದಲ್ಲಿ ಭಾರೀ ಪ್ರಮಾಣದಲ್ಲಿ ಆಗಿದೆ.ಬೆಂಗಳೂರು ನಗರ,ಕೋಲಾರ, ಯಾದಗಿರಿ, ಕಲಬುರಗಿ, ವಿಜಯಪುರ, ರಾಯಚೂರು ಜಿಲ್ಲೆಗಳಂತೂ ವಾಡಿಕೆಗಿಂತ ಮೂರ್ನಾಲ್ಕು ಪಟ್ಟು ಮಳೆಯಾಗಿರುವುದು ವಿಶೇಷ. ಮೈಸೂರು, ಕೊಡಗು, ಚಾಮರಾಜನಗರ ಜಿಲ್ಲೆಗಳಲ್ಲಿ ಮಾತ್ರ ವಾಡಿಕೆಯಷ್ಟೇ ಮಳೆಯಾಗಿದೆ. ಇನ್ನು ನಾಲ್ಕೈದು ದಿನಗಳಲ್ಲಿ ಮುಂಗಾರು ಕರ್ನಾಟಕ ಪ್ರವೇಶಿಸುವ ಮುನ್ಸೂಚನೆಯಿದ್ದು. ಅಲ್ಲಿವರಗೂ ಕರ್ನಾಟಕದಲ್ಲಿ ಪೂರ್ವ ಮುಂದುವರೆಯುವ ಮಾಹಿತಿಯೂ ಇದೆ.

ಕರ್ನಾಟಕ ಮೇ ತಿಂಗಳ ಮಳೆ ಪ್ರಮಾಣ

Published by HT Digital Content Services with permission from HT Kannada....