ಭಾರತ, ಫೆಬ್ರವರಿ 5 -- ಪೂರಿ, ಪಕೋಡ, ಬೋಂಡಾ, ಬಜ್ಜಿ ಮಾಡುವಾಗ ಹೆಚ್ಚು ಎಣ್ಣೆಯನ್ನು ಬಳಸಲಾಗುತ್ತದೆ. ಈ ತಿನಿಸುಗಳನ್ನು ಕರಿದ ನಂತರ ಎಣ್ಣೆ ಉಳಿಯುತ್ತದೆ. ಪೂರಿ ಮತ್ತು ಪಕೋಡದಂತಹ ತಿನಿಸುಗಳನ್ನು ಕರಿದ ನಂತರ ಉಳಿದ ಎಣ್ಣೆಯನ್ನು ಬಳಸಬಾರದು ಎಂದು ಹೇಳಲಾಗುತ್ತದೆ. ಎಣ್ಣೆ ಕಪ್ಪು ಬಣ್ಣಕ್ಕೆ ತಿರುಗಿದರೂ ಅದನ್ನು ಬಳಸಬಾರದು. ಹಾಗಾಗಿ ಹಲವರು ಈ ಎಣ್ಣೆಯನ್ನು ಎಸೆಯುತ್ತಾರೆ. ಆದರೆ ಕರಿದ ನಂತರ ಉಳಿಯುವ ಎಣ್ಣೆಯು ನಿಜವಾಗಿಯೂ ನಮಗೆ ಉಪಯುಕ್ತವಾಗಿದೆ. ಇದನ್ನು ಎಸೆಯುವ ಬದಲು ಜಿರಳೆ ಮತ್ತು ಇಲಿಗಳನ್ನು ಓಡಿಸಲು ಬಳಸಬಹುದು ಎಂಬುದು ಹಲವರಿಗೆ ತಿಳಿದಿಲ್ಲ. ಹಾಗಾದರೆ ಇದರಿಂದ ಇಲಿ, ಜಿರಳೆ ಓಡಿಸುವುದು ಹೇಗೆ ನೋಡಿ.

ಮನೆಯಲ್ಲಿ ಸರಿಯಾದ ಸ್ವಚ್ಛತೆ ಇಲ್ಲ ಎಂದರೆ ಜಿರಳೆ ಸೇರಿದಂತೆ ಹಲವು ಕ್ರಿಮಿ ಕೀಟಗಳು ಸೇರಿಕೊಳ್ಳುತ್ತವೆ. ಅಲ್ಲದೇ ಇಲಿಗಳು ಕೂಡ ಸುತ್ತಾಡಲು ಆರಂಭಿಸುತ್ತವೆ. ಇದಲ್ಲದೆ, ಇಲಿಗಳು ಹೆಚ್ಚಾಗಿ ಮನೆಗಳಲ್ಲಿ ವಾಸಿಸುತ್ತವೆ. ಇದರಿಂದ ಮನೆ ಅಸ್ತವ್ಯಸ್ಥವಾಗುವ ಜೊತೆಗೆ ಹಲವು ಕಾಯಿಲೆಗಳು ಹರಡುತ್ತವೆ. ಹಾಗಾಗಿ ಇಲಿ, ಜಿರಳೆಯ...