ಭಾರತ, ಏಪ್ರಿಲ್ 30 -- ಕರ್ನಾಟಕ ಮೂಲದ ಹಲವು ನಟಿಯರು ಪರಭಾಷೆಗಳಲ್ಲಿ ನಟಿಸಿ ಯಶಸ್ಸು ಪಡೆದಿದ್ದಾರೆ. ರಶ್ಮಿಕಾ ಮಂದಣ್ಣ, ದೀಪಿಕಾ ಪಡುಕೋಣೆ, ಐಶ್ವರ್ಯಾ ರೈ ಮಾತ್ರವಲ್ಲದೆ ಪೂಜಾ ಹೆಗ್ಡೆ ಮುಂತಾದವರು ಬೇರೆ ಭಾಷೆಗಳಲ್ಲಿ ನಟಿಸಿ ಸೈ ಎಣಿಸಿಕೊಂಡಿದ್ದಾರೆ. ಈ ವಾರ ಬಿಡುಗಡೆಯಾಗುವ ಎರಡು ಸಿನಿಮಾಗಳ ಮೂಲಕ ಬಾಕ್ಸ್‌ ಆಫೀಸ್‌ನಲ್ಲಿ ಪೂಜಾ ಹೆಗ್ಡೆ ಮತ್ತು ಶ್ರೀನಿಧಿ ಶೆಟ್ಟಿ ಪೈಪೋಟಿ ನಡೆಸಲಿದ್ದಾರೆ.

ಹಿಟ್ 3 ಸಿನಿಮಾ ಮೂಲಕ ಶ್ರೀನಿಧಿ ಶೆಟ್ಟಿ ಟಾಲಿವುಡ್‌ಗೆ ನಾಯಕಿಯಾಗಿ ಎಂಟ್ರಿ ಕೊಡುತ್ತಿದ್ದಾರೆ. ಈ ಆಕ್ಷನ್ ಸಿನಿಮಾದಲ್ಲಿ ನಾನಿ ನಾಯಕನಾಗಿ ನಟಿಸಿದ್ದಾರೆ.

ರೆಟ್ರೋ ಮೂಲಕ ಪೂಜಾ ಹೆಗ್ಡೆ ದೀರ್ಘ ಗ್ಯಾಪ್ ನಂತರ ತೆಲುಗು ಪ್ರೇಕ್ಷಕರನ್ನು ಭೇಟಿಯಾಗುತ್ತಿದ್ದಾರೆ. ಇದು ಮೂಲ ತಮಿಳು ಸಿನಿಮಾ. ತೆಲುಗಿನಲ್ಲಿಯೂ ಬಿಡುಗಡೆಯಾಗಲಿದೆ. ಕನ್ನಡದಲ್ಲಿ ಬಿಡುಗಡೆಯಾಗುತ್ತಿಲ್ಲ. ಈ ರೊಮ್ಯಾಂಟಿಕ್ ಥ್ರಿಲ್ಲರ್ ಸಿನಿಮಾದಲ್ಲಿ ಸೂರ್ಯಗೆ ಜೋಡಿಯಾಗಿ ಪೂಜಾ ಹೆಗ್ಡೆ ನಟಿಸಿದ್ದಾರೆ.

ಮಿಸ್ ಯೂನಿವರ್ಸ್ ಇಂಡಿಯಾ ಸ್ಪರ್ಧೆಯಿಂದ ಪೂಜಾ ಹೆಗ್ಡೆ ಮತ್ತು ಶ್ರ...