ಭಾರತ, ಏಪ್ರಿಲ್ 7 -- L2 Empuraan vs Pushpa 2 Box Office collection Day 10: ಮೋಹನ್ ಲಾಲ್ ಮತ್ತು ಪೃಥ್ವಿರಾಜ್ ಸುಕುಮಾರನ್ ಅಭಿನಯದ L2 ಎಂಪುರಾನ್‌ ಸಿನಿಮಾ ಮಾಲಿವುಡ್‌ನಲ್ಲಿ ಈವರೆಗೆ ಬಿಡುಗಡೆಯಾದ ಎಲ್ಲಾ ಸಿನಿಮಾಗಳಿಗಿಂತ ಅತಿ ಹೆಚ್ಚು ಗಳಿಕೆ ಕಂಡ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಸಿನಿಮಾ ತನ್ನ ಗೆಲುವಿನ ನಾಗಾಲೋಟವನ್ನು ಮುಂದುವರಿಸಿದ್ದು, ಟಾಲಿವುಡ್‌ ಸೂಪರ್‌ ಸ್ಟಾರ್ ಅಲ್ಲು ಅರ್ಜುನ್ ನಟನೆಯ 'ಪುಷ್ಪಾ 2' ಜೊತೆ ಎಂಪುರಾನ್‌ ಸಿನಿಮಾದ ಕಲೆಕ್ಷನ್ ಅನ್ನು ಹೋಲಿಕೆ ಮಾಡಲಾಗುತ್ತಿದೆ. ಸುಕುಮಾರ್ ನಿರ್ದೇಶನದ, ಮೈತ್ರಿ ಮೂವಿ ಮೇಕರ್ಸ್ ನಿರ್ಮಿಸಿದ 'ಪುಷ್ಪ 2' ಭಾರತದಲ್ಲಿ ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವಾಗಿದೆ.

2019ರಲ್ಲಿ ಬಿಡುಗಡೆಯಾದ ಚಲನಚಿತ್ರ 'ಲೂಸಿಫರ್'‌ನ ಮುಂದುವರಿದ ಭಾಗವಾದ 'L2 ಎಂಪೂರಾನ್' ಮಾರ್ಚ್ 27 ರಂದು ಭಾರತದಲ್ಲಿ 21 ಕೋಟಿ ನಿವ್ವಳ ಗಳಿಸಿತು. ಆದರೆ ಪುಷ್ಪಾ 2ಗೆ ಹೋಲಿಸಿದರೆ ಇದರ ಗಳಿಕೆ ಕಡಿಮೆ ಎಂದು ಸಕ್ನಿಲ್ಕ್ ವರದಿ ಮಾಡಿದೆ.

ಪೃಥ್ವಿರಾಜ್ ಸುಕುಮಾರನ್ ನಿ...