ಭಾರತ, ಏಪ್ರಿಲ್ 28 -- ಪುಷ್ಪ-2 ಚಿತ್ರ ನಟ ಅಲ್ಲು ಅರ್ಜುನ್ ಮತ್ತು ನಿರ್ದೇಶಕ ಸುಕುಮಾರ್ ಅವರ ವೃತ್ತಿಜೀವನದ ಅತಿ ದೊಡ್ಡ ಹಿಟ್ ಆಗಿದೆ. ಈ ಆ್ಯಕ್ಷನ್ ಸಿನಿಮಾವು ವಿಶ್ವದಾದ್ಯಂತ 1800 ಕೋಟಿ ಗಳಿಕೆ ಮಾಡಿದೆ. ಇದು ಭಾರತೀಯ ಸಿನಿಮಾ ಇತಿಹಾಸದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಮೂರನೇ ಚಿತ್ರ ಎನ್ನಿಸಿಕೊಂಡು ಇತಿಹಾಸ ನಿರ್ಮಿಸಿತು.

ಸುಕುಮಾರ್ ತಾನ್ನೊಬ್ಬ ಯಶಸ್ವಿ ನಿರ್ದೇಶಕ ಎಂದು ಪ್ರೂವ್ ಮಾಡಿಕೊಳ್ಳುವ ಮೊದಲು ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಆರಂಭಿಸಿದ್ದರು. ನಿರ್ದೇಶಕರಾಗಿ ತಮ್ಮ ವೃತ್ತಿಜೀವನದ ಆರಂಭದಿಂದಲೂ, ಅವರು ಪರಸ್ಪರ ಯಾವುದೇ ಸಂಬಂಧವಿಲ್ಲದೆ ವೈವಿಧ್ಯಮಯ ಚಲನಚಿತ್ರಗಳನ್ನು ನಿರ್ಮಿಸುವ ಮೂಲಕ ಸೃಜನಶೀಲ ಪ್ರತಿಭೆಯಾಗಿ ಖ್ಯಾತಿಯನ್ನು ಗಳಿಸಿದ್ದಾರೆ. ಲವ್‌, ಆಕ್ಷನ್, ಫ್ಯಾಮಿಲಿ, ಎಮೋಷನಲ್‌ ಹೀಗೆ ಎಲ್ಲಾ ಪ್ರಕಾರಗಳಲ್ಲಿಯೂ ಅವರು ಸಿನಿಮಾ ಮಾಡಿದ್ದಾರೆ. ಆದರೆ ಸುಕುಮಾರ್ ಸಹಾಯಕ ನಿರ್ದೇಶಕರಾಗಿ ಹಾಸ್ಯ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ ಎಂಬುದು ಗಮನಾರ್ಹ.

ಚಲನಚಿತ್ರಗಳಲ್ಲಿನ ಆಸಕ್ತಿಯಿಂದಾಗಿ ಉಪನ್ಯಾಸಕ ಹುದ್ದೆ...