ಭಾರತ, ಫೆಬ್ರವರಿ 2 -- ಮನೆಗೆ ಪುಟ್ಟ ಕಂದಮ್ಮನ ಆಗಮನವಾದಾಗ ಪೋಷಕರು ಹಾಗೂ ಮನೆಯವರು ಮಗುವಿಗೆ ಒಂದು ಮುದ್ದಾದ ಹೆಸರಿಡಬೇಕು ಎಂದು ಯೋಚಿಸುವುದು ಸಹಜ. ಇತ್ತೀಚಿಗೆ ವಿಶಿಷ್ಠವಾದ ಅರ್ಥಪೂರ್ಣ ಹೆಸರುಗಳನ್ನು ಇಡಲಾಗುತ್ತದೆ. ಪುರಾಣಗಳಲ್ಲಿ ಸಾಕಷ್ಟು ಅರ್ಥಪೂರ್ಣ ಹಾಗೂ ವಿಶಿಷ್ಠ ಎನ್ನಿಸುವಂತ ಹೆಸರುಗಳಿವೆ. ನಿಮಗೆ ಹೆಣ್ಣುಮಗುವಾಗಿದ್ದರೆ ಈ ಹೆಸರುಗಳನ್ನು ಆಯ್ಕೆ ಮಾಡಿಕೊಳ್ಳಬಹುದು.

ಹೆಣ್ಣುಮಗುವಿಗೆ ಇರಿಸಲು ವಿಶಿಷ್ಠವಾದ ಹೆಸರಿಗಾಗಿ ನೀವು ಹುಡುಕುತ್ತಿದ್ದರೆ ಪುರಾಣ ಪ್ರೇರಿತ ವಿಭಿನ್ನ ಅರ್ಥ ಕೊಡುವ ಈ ಹೆಸರುಗಳನ್ನು ನೀವು ಆಯ್ಕೆ ಮಾಡಿಕೊಳ್ಳಬಹುದು. ಇಂತಹ ಹೆಸರುಗಳು ಪುರಾಣ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೂ ಪಸರಿಸುವಂತೆ ಮಾಡುವುದು ಸತ್ಯ. ಹಾಗಾದರೆ ಹೆಣ್ಣುಮಕ್ಕಳಿಗೆ ಇಡಬಹುದಾದ ಪುರಾಣ ‍ಪ್ರೇರಿತ ಹೆಸರುಗಳು ಹಾಗೂ ಅವುಗಳ ಅರ್ಥವನ್ನು ಇಲ್ಲಿ ತಿಳಿಯೋಣ.

ಆರಾಧನೆ ಅಥವಾ ಆರಾಧನಾ ಎಂದರೆ ಪೂಜೆ ಅಥವಾ ಭಕ್ತಿ ಎಂದರ್ಥ. ಇದು ದೈವಿಕ ಭಾವದ ಜೊತೆ ಗೌರವ ಮತ್ತು ಮೆಚ್ಚುಗೆಯನ್ನು ಸಂಕೇತಿಸುತ್ತದೆ, ಆಧ್ಯಾತ್ಮ ಅಥವಾ ಸಮರ್ಪಿತ ಸ್ವಭ...