Bengaluru, ಮಾರ್ಚ್ 17 -- Puneeth Rajkumar Birthday: ಪುನೀತ್‍ ರಾಜಕುಮಾರ್ ನಿಧನರಾಗಿ ಮೂರೂವರೆ ವರ್ಷಗಳಾಗಿವೆ. ಪುನೀತ್‍ ನಿಧನಕ್ಕೂ ಮೊದಲು ಮೂರು ಚಿತ್ರಗಳಲ್ಲಿ ನಟಿಸಿದ್ದರು. 'ಜೇಮ್ಸ್', 'ಲಕ್ಕಿ ಮ್ಯಾನ್‍' ಮತ್ತು 'ಗಂಧದ ಗುಡಿ' ಚಿತ್ರಗಳಲ್ಲಿ ಪುನೀತ್‍ ನಟಿಸಿದ್ದು, ಅವರ ನಿಧನದ ನಂತರ ಆ ಚಿತ್ರಗಳು ಬಿಡುಗಡೆಯಾಗಿವೆ. ಇದಲ್ಲದೆ, ಪುನೀತ್‍ ಈಗಿಲ್ಲದಿದ್ದರೂ, ಅವರನ್ನು ಹಲವು ಚಿತ್ರತಂಡಗಳು ನೆನಪಿಸುತ್ತಲೇ ಇವೆ. ಅವರ ಜೊತೆಗೆ ಕೆಲಸ ಮಾಡುವುದಕ್ಕೆ ಆಸೆಪಟ್ಟವರು, ಅವರನ್ನೇ ಸ್ಫೂರ್ತಿಯನ್ನಾಗಿಸಿಕೊಂಡು ಚಿತ್ರ ಮಾಡುತ್ತಲೇ ಇದ್ದಾರೆ.

ಪುನೀತ್‍ ನಿಧನರಾದ ಈ ಮೂರೂವರೆ ವರ್ಷಗಳಲ್ಲಿ ಸುಮಾರು 500 ಚಿತ್ರತಂಡಗಳು ಪುನೀತ್‍ ಅವರಿಗೆ ತಮ್ಮ ಚಿತ್ರಗಳನ್ನು ಅರ್ಪಿಸುವುದರ ಜೊತೆಗೆ ಚಿತ್ರಗಳ ಆರಂಭದಲ್ಲಿ ಪುನೀತ್‍ ಅವರ ಸಾಧನೆ, ಕೊಡುಗೆ, ನಗುವನ್ನು ನೆನಪಿಸಿಕೊಂಡಿವೆ. ಅದರಲ್ಲೂ ಬಿಡುಗಡೆಯಾದ ಮೊದಲ ಎರಡು ವರ್ಷಗಳ ಕಾಲ ಪ್ರತಿಯೊಂದು ಚಿತ್ರವನ್ನು ಪುನೀತ್‍ ಅವರಿಗೆ ಅರ್ಪಿಸಲಾಗಿತ್ತು. ಪುನೀತ್‍ ಅವರ ಫೋಟೋ ಜೊತೆಗೆ ಒಂದು ಪುಟ್ಟ ...