ಭಾರತ, ಮಾರ್ಚ್ 11 -- Puneeth Rajkumar 50th Birthday: ಕನ್ನಡ ಚಿತ್ರರಂಗದ ದಂತಕಥೆ ದಿವಂಗತ ಪುನೀತ್ ರಾಜ್‌ಕುಮಾರ್‌ ಅವರ 50ನೇ ಜಯಂತಿ ಮಾರ್ಚ್‌ 17 ರಂದು ನಡೆಯಲಿದೆ. ತನ್ನಿಮಿತ್ತವಾಗಿ ಭಾರತೀಯ ಅಂಚೆ ಸೋಮವಾರ (ಮಾರ್ಚ್ 10) ಪುನೀತ್‌ ರಾಜ್‌ಕುಮಾರ್ ಚಿತ್ರಗಳು ಇರುವಂತಹ ವಿಶೇಷ ಅಂಚೆಕಾರ್ಡ್‌ಗಳನ್ನು ಬಿಡುಗಡೆ ಮಾಡಿದೆ. ಭಾರತೀಯ ಅಂಚೆಯ ಕರ್ನಾಟಕ ವೃತ್ತದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ರಾಜೇಂದ್ರ ಕುಮಾರ್‌ ಈ ಪೋಸ್ಟ್‌ಕಾರ್ಡ್‌ಗಳನ್ನು ಬಿಡುಗಡೆ ಮಾಡಿದರು.

ಪುನೀತ್‌ ರಾಜ್‌ಕುಮಾರ್‌ 50ನೇ ಹುಟ್ಟುಹಬ್ಬ ನಿಮಿತ್ತ, ಪುನೀತ್‌ ರಾಜ್‌ಕುಮಾರ್ ಚಿತ್ರಗಳು ಇರುವಂತಹ ವಿಶೇಷ ಅಂಚೆಕಾರ್ಡ್‌ಗಳನ್ನು ಬಿಡುಗಡೆ ಮಾಡಿದ ಕರ್ನಾಟಕ ವೃತ್ತದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ರಾಜೇಂದ್ರ ಕುಮಾರ್‌, " ಅಪ್ಪು ಅವರ 50ನೇ ಜಯಂತಿ ಆಚರಣೆಗಾಗಿ ನಾವು ಅಪ್ಪು ಗಂಧದಗುಡಿ ಅಗರಬತ್ತಿ ಸಹಯೋಗದಲ್ಲಿ ಪಿಕ್ಚರ್ ಪೋಸ್ಟ್‌ಕಾರ್ಡ್‌ಗಳನ್ನು ಹೊರತಂದಿದ್ದೇವೆ" ಎಂದು ಹೇಳಿದ್ದಾಗಿ ಪಿಐಟಿ ವರದಿ ಮಾಡಿದೆ.

"ಅಂಚೆ ಕಾರ್ಡ್‌, ಅಂಚೆ ಚೀಟಿ ಸಂಗ್ರಾಹಕರು ...