Bengaluru, ಮಾರ್ಚ್ 17 -- Puneeth Rajkumar's 50th birthday: ಇಂದು (ಮಾ. 17) ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಅವರ 50ನೇ ಬರ್ತ್‌ಡೇ. ಈ ಬರ್ತ್‌ಡೇ ನೆಪದಲ್ಲಿ, ಅವರ ಅನುಪಸ್ಥಿತಿಯ ನಡುವೆಯೂ ಪುನೀತ್‌ ಕುರಿತು ಒಂದಷ್ಟು ಹೊಸ ಹೊಸ ಪ್ರಯೋಗಗಳು ಸಿನಿಮಾರಂಗದಲ್ಲಾಗುತ್ತವೆ. ಇದೀಗ ಅಪ್ಪು ಟ್ಯಾಕ್ಸಿ ಹೆಸರಿನ ಸಿನಿಮಾವೊಂದು ಶುರುವಾಗಿದೆ. ಈ ಚಿತ್ರದ ಪೋಸ್ಟರ್‌ ಬಿಡುಗಡೆ ಆಗಿದ್ದು, ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ತಯಾರಾಗಲಿದೆ.

ಜೀವನ ಸಂಚಾರ ಎನ್ನುವ ಕಥಾ ತಿರುಳನ್ನು ಇಟ್ಟುಕೊಂಡು ಪುನೀತ್ ರಾಜ್‌ಕುಮಾರ್ ಅವರ ಆದರ್ಶ ಜೀವನ ಮೌಲ್ಯದ ಸಾಂಕೇತಿಕವಾಗಿ, ಒಬ್ಬ ಟ್ಯಾಕ್ಸಿ ಡ್ರೈವರ್‌ ಜೀವನದ ನಿಜ ಕಥೆಯೀಗ ತೆರೆಮೇಲೆ ಬರುತ್ತಿದೆ. ಅಪ್ಪು ಮಾಡಿದ ಸಹಾಯದಿಂದ ತನ್ನ ಜೀವನ ರೂಪಿಸಿಕೊಂಡ ಸತ್ಯ ಘಟನೆಯನ್ನು ಆಧರಿಸಿದ ಸಿನಿಮಾವನ್ನು ದಿಲೀಪ್ ಕುಮಾರ್ ಎಚ್ ಆರ್ ಹೊತ್ತು ತರುತ್ತಿದ್ದಾರೆ. ಸಮಾಜದ ಎಷ್ಟೋ ಜನಗಳ ಜೀವನದ ಭಾಗವಾಗಿ ಅಪ್ಪು ಪರೋಕ್ಷವಾಗಿ ಹೇಗೆ ಪ್ರಭಾವಿತರಾಗಿದ್ದಾರೆ ಎಂಬ ಗೊತ್ತಿಲ್ಲದ ಒಂದಷ್ಟು ವಿಷಯಗಳ...