Bengaluru, ಫೆಬ್ರವರಿ 26 -- ಕರ್ನಾಟಕ ರತ್ನ ಪುನೀತ್‌ ರಾಜ್‌ಕುಮಾರ್‌ ಅವರಿಗೆ ಮ್ಯಾನೇಜರ್‌ ಆಗಿ ಕೆಲಸ ಮಾಡಿದ್ದ ಎನ್‌ ಎಸ್‌ ರಾಜ್‌ಕುಮಾರ್‌ ಅವರ ಪುತ್ರನ ಕಲ್ಯಾಣ ಕಾರ್ಯ ನೆರವೇರಿದೆ. ನಿರ್ಮಾಪಕರಾಗಿಯೂ ಗುರುತಿಸಿಕೊಂಡಿರುವ ಅವರು, ಮೈತ್ರಿ, ಮೈನಾ ಸೇರಿ ಹಲವು ಸಿನಿಮಾಗಳನ್ನೂ ನಿರ್ಮಾಣ ಮಾಡಿದ್ದಾರೆ.

ಎನ್‌ ಎಸ್‌ ರಾಜ್‌ಕುಮಾರ್ ಪುತ್ರ ಸೂರಜ್ - ಮನಿಷಾ ಜೋಡಿಯ ಮದುವೆ ಇತ್ತೀಚೆಗಷ್ಟೇ ನೆರವೇರಿದ್ದು, ಸ್ಯಾಂಡಲ್‌ವುಡ್‌ ಮಾತ್ರವಲ್ಲದೆ, ರಾಜಕೀಯ ಗಣ್ಯರೂ ಆಗಮಿಸಿ ನವ ಜೋಡಿಗೆ ಶುಭ ಹಾರೈಸಿದ್ದಾರೆ.

ಪುನೀತ್‌ ರಾಜ್‌ಕುಮಾರ್‌ ಪತ್ನಿ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಎನ್‌ ಎಸ್‌ ರಾಜ್‌ಕುಮಾರ್‌ ಪುತ್ರನ ವಿವಾಹ ಕಾರ್ಯಕ್ರಮಕ್ಕೆ ಆಗಮಿಸಿದ್ದರು.

ಸೂರಜ್‌ ಮತ್ತು ಮನಿಷಾ ಜೋಡಿಯ ಅದ್ಧೂರಿ ಮದುವೆ ಸಂಭ್ರಮದಲ್ಲಿ ಭಾಗಿಯಾಗಿ ನವ ಜೋಡಿಗೆ ಶುಭ ಕೋರಿದರು.

ಇನ್ನು ಇದೇ ಮದುವೆಗೆ ಹ್ಯಾಟ್ರಿಕ್‌ ಹೀರೋ ಶಿವರಾಜ್‌ಕುಮಾರ್‌ ಸನ್‌ಗ್ಲಾಸ್‌ ಹಾಕಿಕೊಂಡು ಖಡಕ್‌ ಆಗಿಯೇ ಎಂಟ್ರಿಕೊಟ್ಟಿದ್ದಾರೆ.

ನವ ಜೋಡಿ ಸೂರಜ್‌ ಮತ್ತು ಮನಿಷಾಗೆ ಅಕ್...