Bengaluru, ಮಾರ್ಚ್ 1 -- Puneeth Rajkumar Birthday: ಮಾರ್ಚ್‌ ತಿಂಗಳ ಮೊದಲ ದಿನವೇ ಸೋಷಿಯಲ್‌ ಮೀಡಿಯಾದಲ್ಲಿ, ವಿಶೇಷವಾಗಿ ಎಕ್ಸ್‌ನಲ್ಲಿ ಡಾ. ಪುನೀತ್‌ ರಾಜ್‌ಕುಮಾರ್‌ ಟಾಪ್‌ ಟ್ರೆಂಡಿಂಗ್‌ನಲ್ಲಿದ್ದಾರೆ. ಅಪ್ಪು ಅಭಿಮಾನಿಗಳು ಸೋಷಿಯಲ್‌ ಮೀಡಿಯಾದಲ್ಲಿ ಇದು ಪುನೀತ್‌ ರಾಜ್‌ ಕುಮಾರ್‌ ಹುಟ್ಟುಹಬ್ಬದ ತಿಂಗಳು ಎಂದು ಸಂಭ್ರಮಿಸುತ್ತಿದ್ದಾರೆ.

ಇದೇ ಮಾರ್ಚ್‌ 14ರಂದು ಪುನೀತ್‌ ರಾಜ್‌ಕುಮಾರ್‌ ಅವರ ಅಪ್ಪು ಸಿನಿಮಾದ ಮರುಬಿಡುಗಡೆಯೂ ಇದೆ. ಹೀಗಾಗಿ, ಅಪ್ಪು ಅಭಿಮಾನಿಗಳಿಗೆ ಸಂಭ್ರಮ ಇನ್ನಷ್ಟು ಹೆಚ್ಚಾಗಿದೆ. ಕರ್ನಾಟಕದ ಚಿತ್ರಮಂದಿರಗಳಲ್ಲಿ ಅಪ್ಪು ಸಿನಿಮಾ ಮತ್ತೆ ಬಿಡುಗಡೆಯಾಗುತ್ತಿದೆ. ಮತ್ತೊಮ್ಮೆ ಹಿರಿಪರದೆಯ ಮೇಲೆ ದಿವಂಗತ ಪುನೀತ್‌ ರಾಜ್‌ಕುಮಾರ್‌ ಸಿನಿಮಾ ನೋಡುವ ಅವಕಾಶ ಅಪ್ಪು ಅಭಿಮಾನಿಗಳಿಗೆ ದೊರಕಲಿದೆ.

ಸದ್ಯ ಸೋಷಿಯಲ್‌ ಮೀಡಿಯಾದಲ್ಲಿ ಪುನೀತ್‌ ರಾಜ್‌ಕುಮಾರ್‌ ಫೋಟೋಗಳನ್ನು, ವಿಡಿಯೋಗಳನ್ನು, ಜಿಫ್‌ಗಳನ್ನು ಹಾಕುತ್ತ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. "It's Power Star Puneeth Rajkumar. Our dea...