ಭಾರತ, ಫೆಬ್ರವರಿ 6 -- Puttur Temple Land Dispute: ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ದೇವಸ್ಥಾನಗಳಲ್ಲಿ ಒಂದಾಗಿರುವ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿರುವ ಮನೆಗಳು ನಾನಾ ಕಾರಣಗಳಿಂದ ನೆಲಸಮವಾಗಿವೆ. ಕಳೆದ ನಾಲ್ಕೈದು ದಿನಗಳಿಂದ ಈ ಪ್ರಕರಣವೀಗ ಸಾಕಷ್ಟು ಸದ್ದು ಮಾಡಿದ್ದು, ಇದೀಗ ರಾಜಕೀಯ ಪಕ್ಷಗಳೂ ಮಧ್ಯಪ್ರವೇಶಿಸಿವೆ.

ದೇವಸ್ಥಾನದ ಅಭಿವೃದ್ಧಿಗಾಗಿ ದೇವಸ್ಥಾನದ ಜಮೀನಿನಲ್ಲಿ ಇದ್ದ ಎಂಟು ಮನೆಗಳ ತೆರವಿಗೆ ಸೂಚಿಸಲಾಗಿತ್ತು. ಈ ಪೈಕಿ ಆರು ಮನೆಗಳನ್ನು ಬಿಟ್ಟುಕೊಟ್ಟಿದ್ದರೆ, ಸ್ಥಳೀಯ ನ್ಯಾಯವಾದಿ ಹಾಗೂ ಬಿಜೆಪಿ ಮುಖಂಡರೊಬ್ಬರು ಆಕ್ಷೇಪ ವ್ಯಕ್ತಪಡಿಸಿದ್ದರು. ಇದೇ ವೇಳೆ ನ್ಯಾಯವಾದಿ ಮನೆಗೆ ಫೆ.2ರಂದು ಮರ ಬಿದ್ದಿತ್ತು. ಬಿಜೆಪಿ ಮುಖಂಡ ರಾಜೇಶ್ ಬನ್ನೂರು ಜತೆಗೆ ಮಂಗಳವಾರ ಮಾತುಕತೆ ನಿಗದಿಯಾಗಿದ್ದರೂ ಅವರು ತೆರವಿಗೆ ಕಾಲಾವಕಾಶ ಕೋರಿದ್ದರು ಎನ್ನಲಾಗಿದೆ. ಆದರೆ ಮಂಗಳವಾರ ಮಧ್ಯರಾತ್ರಿ ರಾಜೇಶ್ ಬನ್ನೂರು ಸುಪರ್ದಿಯಲ್ಲಿದ್ದ ಮನೆಯನ್ನು ಜೆಸಿಬಿ ಬಳಸಿ ನೆಲಸಮ ಮಾಡಲಾಯಿತು. ಈ ಸಂದರ್ಭ ಮನೆಯಲ್ಲಿ ಸಾಕ...