ಭಾರತ, ಏಪ್ರಿಲ್ 11 -- ಪುತ್ತೂರು ಶ್ರೀ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೆ ನಿನ್ನೆ (ಏಪ್ರಿಲ್ 10) ಶುರುವಾಗಿದೆ. ಶ್ರೀ ದೇವರ ಮೊದಲ ದಿನದ ಪೇಟೆ ಸವಾರಿ ನೆಹರೂ ನಗರದ ಬೊಳುವಾರು, ಶ್ರೀ ರಾಮ ಪೇಟೆ ಕಾರ್ಜಾಲು, ರಕ್ತೇಶ್ವರಿ ದೇವಸ್ಥಾನ, ಕಲ್ಲೇಗ, ಕರ್ಮಲವರೆಗೆ ಹೋಗಿ ವಾಪಸ್ ದೇವಸ್ಥಾನದಲ್ಲಿ ಸಂಪನ್ನವಾಯಿತು.

ಮಹಾಲಿಂಗೇಶ್ವರ ದೇವರು ಮೊದಲ ದಿನ ಕೆರೆ ಸಮೀಪದ ದ್ವಾರದ ಮೂಲಕ ಪೇಟೆ ಸವಾರಿ ಶುರು ಮಾಡಿದ್ದು, ದಾರಿಯುದ್ದಕ್ಕೂ ದೇವರನ್ನು ಬರಮಾಡಿಕೊಳ್ಳಲು ಭಕ್ತರು ಹಣ್ಣು ಕಾಯಿ, ಮಲ್ಲಿಗೆ ಹೂವಿನ ಮಾಲೆ ಮುಂತಾದವುಗಳನ್ನು ಸಿದ್ಧಮಾಡಿಟ್ಟುಕೊಂಡು ಕಾಯುತ್ತಿದ್ದರು.

ದಾರಿಯುದ್ದಕ್ಕೂ ಅಲ್ಲಲ್ಲಿ ನೆಲ ಸಾರಿಸಿ ರಂಗೋಲಿ ಬಿಡಿಸಿ ದೇವರನ್ನು ಬರಮಾಡಿಕೊಂಡ ದೃಶ್ಯ ಭಕ್ತಿಭಾವನೆಯನ್ನು ಉದ್ದೀಪಿಸುವಂತೆ ಇತ್ತು.

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಸಂಜೆ ದೇವರ ದರ್ಶನ ಬಲಿ ನಡೆದ ಬಳಿಕ, ಶ್ರೀ ದೇವರು ಪೇಟೆ ಸವಾರಿ ಹೊರಡುವುದು ವಾಡಿಕೆ. ಇದರಂತೆ, ಜಾತ್ರೆಯ ಮೊದಲ ದಿನ (ಏಪ್ರಿಲ್ 10) ಶ್ರೀ ...