ಭಾರತ, ಮಾರ್ಚ್ 4 -- ಮಂಗಳೂರು: ಪುತ್ತೂರಿನಲ್ಲಿ ನಡೆದ 32ನೇ ವರ್ಷದ ಕೋಟಿ ಚೆನ್ನಯ ಜೋಡುಕರೆ ಕಂಬಳದಲ್ಲಿ ಅಡ್ಡ ಹಲಗೆ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು 2 ಪವನ್ ಚಿನ್ನ ಗೆದ್ದ ಬಾಬು ಹಾಗೂ ಕರ್ಣ ಹೆಸರಿನ ಕೋಣಗಳು ತಮ್ಮ ಸಾಧನೆ ಮೂಲಕ ಕಂಬಳಪ್ರೇಮಿಗಳ ಮನಸೂರೆಗೊಂಡಿವೆ. ವಿಶೇಷವೆಂದರೆ 8 ವರ್ಷದ ಪುಟ್ಟ ಬಾಲಕಿ ಹೆಸರಲ್ಲಿ ಈ ಕೋಣಗಳು ಓಡಿವೆ. ಹೀಗಾಗಿ 3ನೇ ತರಗತಿ ವಿದ್ಯಾರ್ಥಿನಿಗೆ ಹವೀಶಾ, ಇದರ ಕ್ರೆಡಿಟ್ ಪಡೆದುಕೊಂಡ ಅದೃಷ್ಟವಂತೆ.

ಹವೀಶಾ ಎಂಬ ಈ ಬಾಲಕಿ ಪುತ್ತೂರಿನ ಹರೀಶ್ ಶಾಂತಿ ಹಾಗೂ ಸುಜಾತಾ ದಂಪತಿಯ ಪುತ್ರಿ. ಹಾರಾಡಿ ಸರ್ಕಾರಿ ಮಾದರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 3ನೇ ತರಗತಿಯಲ್ಲಿ ಓದುತ್ತಿರುವ ಹವೀಶಾ ಹೆಸರಲ್ಲಿ ಹರೀಶ್ ಶಾಂತಿ ಅವರು ಬಾಬು - ಕರ್ಣ ಕೋಣಗಳನ್ನು ಅಡ್ಡಹಲಗೆ ವಿಭಾಗದಲ್ಲಿ ಸ್ಪರ್ಧೆಗೆ ಇಳಿಸಿದ್ದರು.

ಬಾಬು - ಕರ್ಣ ಮೂಲತಃ ನಾರಾವಿಯ ಯುವರಾಜ ಜೈನ್ ಅವರ ಕೋಣಗಳು. ಒಪ್ಪಂದದ ಪ್ರಕಾರ, ಈ ಕೋಣಗಳನ್ನು ಹರೀಶ್ ಶಾಂತಿ, ತಮ್ಮ ಮಗಳ ಹೆಸರಲ್ಲಿ ಸ್ಪರ್ಧೆಗೆ ಇಳಿಸಿದ್ದರು. ವೃತ್ತಿಯಲ್ಲಿ ಪುರೋಹಿ...