ಭಾರತ, ಫೆಬ್ರವರಿ 24 -- ಮಂಗಳೂರು: ಮಹಿಳೆಯ ಹೆರಿಗೆ ಸಿಸೇರಿಯನ್ ಮಾಡುವ ವೇಳೆ ಬಟ್ಟೆಯೊಂದು ಹೊಟ್ಟೆಯಲ್ಲೇ ಉಳಿದು, ಅದು ಗೊತ್ತಾದ ಬಳಿಕವೂ ವೈದ್ಯರು ನಿರ್ಲಕ್ಯ ಮಾಡಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದಿದ್ದು, ಘಟನೆಯಿಂದ ನೊಂದ ಮಹಿಳೆಯ ಪತಿ ವೈದ್ಯರ ವಿರುದ್ಧ ದೂರು ನೀಡಿದ್ದಾರೆ. ಈ ಕುರಿತು ಪುತ್ತೂರು ಪ್ರೆಸ್ ಕ್ಲಬ್ ನಲ್ಲಿ ಮಹಿಳೆ ಪತಿ ಗಗನ್ ದೀಪ್ ಸುದ್ದಿಗೋಷ್ಠಿ ನಡೆಸಿ, ವೈದ್ಯರ ವರ್ತನೆ ಕುರಿತು ಅಸಮಾಧಾನ ವ್ಯಕ್ತಪಡಿಸಿ, ತನ್ನ ಪತ್ನಿ ಎರಡು ತಿಂಗಳು ಅನುಭವಿಸಿದ ನರಕಯಾತನೆಯನ್ನು ವಿವರಿಸಿದರು.

ಇಷ್ಟು ದೊಡ್ಡ ಬಟ್ಟೆಯ ತುಂಡು ಕಾಣಿಸಲಿಲ್ಲ ಎಂದರೆ ಅದು ಯಾರ ತಪ್ಪು? ಅದನ್ನು ನೋಡುವುದನ್ನು ವೈದ್ಯರೇ ಮಾಡಬೇಕಲ್ಲವೇ? ನಾವು ಕಣ್ಣುಮುಚ್ಚಿ ಅವರನ್ನು ನಂಬುವುದಲ್ಲವಾ? 10 ಸೆಂಟಿ ಮೀಟರ್ ಉದ್ದದ ಬಟ್ಟೆ ಯಾಕೆ ಕಾಣಿಸಲಿಲ್ಲ? ಅದು ಸ್ಕ್ಯಾನಿಂಗ್‌ನಲ್ಲಿ ಕಂಡುಬಂದರೂ ಯಾಕೆ ಅವರು ಅದನ್ನು ನಿರ್ಲಕ್ಷ್ಯ ಮಾಡಿದರು? ನಾನು ಸಾಮಾನ್ಯ ಕೃಷಿಕ. ಹೊಟ್ಟೆಯಲ್ಲಿ ಬಟ್ಟೆ ಉಳಿದಿದೆಯೇ, ಕತ್ತರಿ ಉಳಿದಿದೆಯೇ ಎಂಬುದನ್ನು...