Bengaluru, ಫೆಬ್ರವರಿ 24 -- ಕೊರೊನಾ ಸಮಯದಲ್ಲಿ ಆರಂಭಗೊಂಡ 'ಗ್ರಾಮಜನ್ಯ' ಎಂಬ ರೈತ ಉತ್ಪಾದಕ ಕಂಪೆನಿಯ ಹೊಸ ಸಾಹಸವೊಂದು ಗ್ರಾಮೀಣ ಜೇನು ಕೃಷಿಕರಿಗೆ ಖುಷಿ ತಂದಿದೆ. ಪುತ್ತೂರಿನಲ್ಲಿ ದಕ್ಷಿಣ ಭಾರತದ ಅತೀ ದೊಡ್ಡ ಜೇನು ಸಂಸ್ಕರಣಾ ಘಟಕ ಸ್ಥಾಪನೆಯಾಗುತ್ತಿದ್ದು ಕೆಲವೇ ದಿನಗಳಲ್ಲಿ ಆರಂಭಗೊಳ್ಳಲಿದೆ. ಐದು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಘಟಕದ ಹಿಂದಿರುವುದು ಉತ್ಸಾಹಿ ಗ್ರಾಮೀಣ ಜನರು ಎನ್ನುವುದು ವಿಶೇಷ. 'ಗ್ರಾಮಜನ್ಯ' ರೈತ ಉತ್ಪಾದಕ ಕಂಪೆನಿಯ ಈ ಕನಸಿನ ಕೂಸಿನ ಕುರಿತು ಮತ್ತು ಜೇನು ಕೃಷಿಯ ಮಹತ್ವದ ಕುರಿತು ಗ್ರಾಮಜನ್ಯ ಸಿಇಒ ರಾಜೇಶ್‌ ಸುವರ್ಣ "ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ"ದ ಜತೆ ಮಾತನಾಡಿದ್ದಾರೆ.

ಇದು 2020ರಲ್ಲಿ ಕೊರೊನಾ ಕಾಲದಲ್ಲಿ ಆರಂಭಿಸಿದ ಸಂಸ್ಥೆ. 2013ರ ಕಂಪನಿ ಆಕ್ಟ್ ಪ್ರಕಾರ ನೋಂದಣಿಗೊಂಡಿದೆ. ರಾಷ್ಟ್ರೀಯ ಜೇನು ಮಂಡಳಿಯ ಅಧಿಕೃತ ಸದಸ್ಯತ್ವ ಪಡೆದಿದ್ದು, ರಾಷ್ಟ್ರೀಯ ಜೇನು ಮಂಡಳಿ (NBB) ಹಾಗೂ ಸಣ್ಣ ಕೃಷಿಕರ ವ್ಯಾಪಾರ ಒಕ್ಕೂಟ (SFAC) ವತಿಯಿಂದ ಜೇನು ಕೃಷಿಯ ಅಧಿಕೃತ ಮಾನ್ಯತೆ ...