ಭಾರತ, ಮಾರ್ಚ್ 22 -- Zee Kannada Serials: ಕನ್ನಡ ಕಿರುತೆರೆಯಲ್ಲಿ ಪಾತ್ರಧಾರಿಗಳ ವಿಚಾರದಲ್ಲಿ ಆಗಾಗ ಬದಲಾವಣೆಗಳು ಆಗುತ್ತಲೇ ಇರುತ್ತವೆ. ಕೆಲವರು ಕಾರಣಾಂತರಗಳಿಂದ ಸೀರಿಯಲ್‌ನಿಂದ ಹಿಂದೆ ಸರಿದರೆ, ಇನ್ನು ಕೆಲವರು ಬೇರೆ ವಾಹಿನಿಯಲ್ಲಿನ ಒಳ್ಳೊಳ್ಳೆಯ ಅವಕಾಶಗಳಿಗಾಗಿ ಕೈಯಲ್ಲಿರುವ ಸೀರಿಯಲ್‌ ಬಿಟ್ಟು ಹೋದ ಉದಾಹರಣೆಗಳೂ ಇವೆ. ಇತ್ತೀಚೆಗಷ್ಟೇ ಜೀ ಕನ್ನಡದ ಅಮೃತಧಾರೆ ಸೀರಿಯಲ್‌ನಲ್ಲಿನ ಮಲ್ಲಿ ಪಾತ್ರ ಬದಲಾಗಿತ್ತು. ಇದೀಗ ಇದೇ ಜೀ ಕನ್ನಡದ ಇನ್ನೆರಡು ಧಾರಾವಾಹಿಗಳಲ್ಲಿನ ಇಬ್ಬರು ಪ್ರಮುಖ ಪಾತ್ರಧಾರಿಗಳೇ ಬದಲಾಗಿದ್ದಾರೆ! ಯಾರವರು? ಇಲ್ಲಿದೆ ಮಾಹಿತಿ.

ಇತ್ತೀಚೆಗಷ್ಟೇ ಅಮೃತಧಾರೆ ಧಾರಾವಾಹಿಯಲ್ಲಿನ ಮಲ್ಲಿ ಪಾತ್ರಧಾರಿ ರಾಧಾ ಭಗವತಿ ಅವರಿಗೆ ಕಲರ್ಸ್‌ ಕನ್ನಡದಲ್ಲಿನ ಭಾರ್ಗವಿ ಸೀರಿಯಲ್‌ನಲ್ಲಿನ ನಾಯಕಿ ಚಾನ್ಸ್‌ ಸಿಕ್ಕಿತ್ತು. ಆ ಬೆನ್ನಲ್ಲೇ, ಮಲ್ಲಿ ಪಾತ್ರಕ್ಕೆ ಬೈ ಬೈ ಹೇಳಿ, ಜೀ ಕನ್ನಡದಿಂದ ಕಾಲು ಹೊರಗಿಟ್ಟಿದ್ದರು. ಇದೀಗ ಕಲರ್ಸ್‌ನಲ್ಲಿ ಭಾರ್ಗವಿ ಎಲ್‌ಎಲ್‌ಬಿ ಸೀರಿಯಲ್‌ನಲ್ಲಿ ಶೀರ್ಷಿಕೆ ಪಾತ್ರವನ್ನು ನಿಭಾಯಿಸುತ್ತಿದ...