ಭಾರತ, ಫೆಬ್ರವರಿ 4 -- ಮಂಗಳೂರು : ಪರವಾನಗಿ ಪಡೆದ ಪಿಸ್ತೂಲ್ ಹೊಂದಿದ್ದ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಬೊಂಡಾಲ ಚಿತ್ತರಂಜನ್ ಶೆಟ್ಟಿ ಅವರಿಗೆ ಆಕಸ್ಮಿಕವಾಗಿ ಗುಂಡೇಟು ತಗುಲಿ ಗಾಯಗಳಾಗಿವೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಅನಂತಾಡಿ ಎಂಬಲ್ಲಿಗೆ ಖಾಸಗಿ ಕೆಲಸಕ್ಕೆಂದು ತೆರಳಿದ್ದ ಸಂದರ್ಭ ಈ ಘಟನೆ ಸಂಭವಿಸಿದೆ. ಇಂದು (ಫೆ.04, ಮಂಗಳವಾರ) ಅವರು ಅನಂತಾಡಿಗೆ ತೆರಳಿದ್ದರು. ಈ ಸಂದರ್ಭ ಹೊಸತಾಗಿ ಖರೀದಿಸಿದ ಪಿಸ್ತೂಲನ್ನು ತನ್ನೊಂದಿಗೆ ಒಯ್ದಿದ್ದರು ಎನ್ನಲಾಗಿದೆ.
ಅನಂತಾಡಿಗೆ ಹೋಗಿದ್ದ ಸಂದರ್ಭದಲ್ಲಿ ತಮ್ಮ ಬಳಿಯಿದ್ದ ಪಿಸ್ತೂಲನ್ನು ಅದುಮಿದ ವೇಳೆ ಈ ಘಟನೆ ನಡೆದಿರಬಹುದು ಎಂದು ಪ್ರಾಥಮಿಕ ಮಾಹಿತಿಯಲ್ಲಿ ತಿಳಿದುಬಂದಿದೆ. ಮಿಸ್ ಫೈರ್ ಆಗಿ ಈ ಘಟನೆ ನಡೆದಿರಬಹುದು ಎಂದು ಶಂಕಿಸಲಾಗಿದೆ. ಕೈಯಲ್ಲಿದ್ದ ಪಿಸ್ತೂಲು ಮಿಸ್ ಫೈರ್ ಆದ ವೇಳೆ ತೊಡೆಯ ಭಾಗಕ್ಕೆ ಗಾಯಗಳಾಗಿವೆ. ಈ ಹಿನ್ನೆಲೆಯಲ್ಲಿ ಸ್ಥಳೀಯರು ಅವರನ್ನು ಮಂಗಳೂರಿನ ಹೊರವಲಯದಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ....
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.