Bengaluru, ಏಪ್ರಿಲ್ 9 -- ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ (ಕೆಎಸ್ಇಎಬಿ) ದ್ವಿತೀಯ ಪಿಯುಸಿ ಫಲಿತಾಂಶ 2025 ಪ್ರಕಟಿಸಿದೆ. ದ್ವಿತೀಯ ಪಿಯುಸಿಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಅವರಿಚ್ಛೆಯ ಭವಿಷ್ಯದ ಬಾಗಿಲು ತೆರೆದುಕೊಂಡಿದೆ. ಆಸಕ್ತಿಯ ವಿಷಯದಲ್ಲಿ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಂಡು, ಅದರಲ್ಲಿ ಪದವಿ, ಉನ್ನತ ಶಿಕ್ಷಣ ಪಡೆಯುವ ಸದಾವಕಾಶ ಒದಗಿಬಂದಿದೆ. ಈ ಸಮಯದಲ್ಲಿ ಅಭ್ಯರ್ಥಿಗಳು ಸರಿಯಾದ ಕೋರ್ಸ್‌ಗಳನ್ನು ಆಯ್ದುಕೊಳ್ಳುವುದರ ಮೂಲಕ ಸುಂದರ, ಸಂತೋಷ ಹಾಗೂ ನೆಮ್ಮದಿಯ ಭವಿಷ್ಯ ಕಟ್ಟಿಕೊಳ್ಳಬಹುದಾಗಿದೆ. ಮುಂದಿನ ಬದುಕು ರೂಪಿಸಿಕೊಳ್ಳಲು ಈಗ ಆಯ್ಕೆ ಮಾಡಿಕೊಳ್ಳುವ ಕೋರ್ಸ್‌ ಮಹತ್ವದ ಪಾತ್ರವಹಿಸುತ್ತದೆ.

ಪಿಯುಸಿಯಲ್ಲಿ ವಿಜ್ಞಾನ ವಿಷಯದಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಇಂಜಿನಿಯರಿಂಗ್‌, ಮೆಡಿಸಿನ್‌, ಫಾರ್ಮಸಿ, ಆಗ್ರಿಕಲ್ಚರ್‌, ನರ್ಸಿಂಗ್‌, ಫಾರೆನ್ಸಿಕ್‌ ಸೈನ್ಸ್‌, ಹೊಟೇಲ್‌ ಮ್ಯಾನೆಜ್‌ಮೆಂಟ್‌, ಏವಿಯೇಷನ್‌ ಮುಂತಾದ ಕೋರ್ಸ್‌ ಆಯ್ದುಕೊಳ್ಳುವುದರಿಂದ ವೃತ್ತಿ ಮಾರ್ಗಗಳು ತೆರೆದುಕೊಳ್ಳುತ್...