ಭಾರತ, ಏಪ್ರಿಲ್ 7 -- ಅವರ ಬಾಲ್ಯದ ಓದು ಅಂದುಕೊಂಡಂತೆ ಇರಲಿಲ್ಲ. ಮೇಷ್ಟ್ರು ಹೇಳಿದ ಪಾಠ ತಲೆಗೆ ಹತ್ತುತ್ತಿರಲಿಲ್ಲ. ಓದುವ ಆಸಕ್ತಿಯೂ ಕುಂದಿತ್ತು. ಹೀಗಾಗಿ ಎಸ್ಸೆಸ್ಸೆಲ್ಸಿ, ಪಿಯುಸಿಯೂ ಅಲ್ಲ, 6ನೇ ತರಗತಿಯಲ್ಲೇ ಫೇಲಾದರು. ತಮ್ಮ ಆರಂಭಿಕ ಶಿಕ್ಷಣದ ಹಂತದಲ್ಲೇ ವೈಫಲ್ಯ ಅನುಭವಿಸಿದ ಅವರು, ಕುಟುಂಬ ಮತ್ತು ಶಿಕ್ಷಕರನ್ನು ಎದುರಿಸಲು ಹೆದರುತ್ತಿದ್ದರು. ಅವಮಾನಕ್ಕೂ ಒಳಗಾದದರು. ಫೇಲ್ ಆದರೂ ತಾನು ಏನಾದರೂ ಸಾಧನೆ ಮಾಡಲೇಬೇಕೆಂಬ ಹಠ, ಛಲ ಅವರಲ್ಲಿ ಕುಗ್ಗಿರಲಿಲ್ಲ. ತನ್ನ ಮನಸ್ಸಿನಲ್ಲಿ ಇದ್ದದ್ದು ಒಂದೇ ನನ್ನ ಸಾಧನೆ ನೋಡಿ ಹೆಮ್ಮೆಪಡುವಂತಿರಬೇಕು ಎಂಬ ಸಕಾರಾತ್ಮಕ ಚಿಂತನೆ.

ಇದೇ ಛಲದಿಂದ ಓದಿನ ಕಡೆಗೆ ಆಸಕ್ತಿ ಬೆಳೆಸಿಕೊಂಡರು. ಶ್ರದ್ಧೆಯಿಂದ ಓದಿದರು. ದೊಡ್ಡ ದೊಡ್ಡ ಸವಾಲುಗಳನ್ನೂ ಮೆಟ್ಟಿ ನಿಂತರು. ಅಂತಿಮವಾಗಿ ಯುಪಿಎಸ್ಸಿ ಪರೀಕ್ಷೆಯಲ್ಲಿ ದೇಶಕ್ಕೆ ಅಗ್ರಸ್ಥಾನ ಪಡೆದು ಐಎಎಸ್​ ಅಧಿಕಾರಿಯಾದರು. ಈ ಸಾಧಕರ ಹೆಸರು ರುಕ್ಮಿಣಿ ರಿಯಾರ್! ಇವರು 6ನೇ ತರಗತಿಯಲ್ಲಿ ಫೇಲ್ ಆದರೇನಂತೆ, ನಂತರ ಛಲದಿಂದ ಓದಿ ಐಎಎಸ್ ಆಗಿದ್ದಾರೆ. ಅದು ಕೂ...