ಭಾರತ, ಏಪ್ರಿಲ್ 9 -- ಪಿಯುಸಿ ಪರೀಕ್ಷೆ ಫಲಿಕಾಂಶ ನಿನ್ನೆ (ಏಪ್ರಿಲ್ 8, ಮಂಗಳವಾರ) ಮಧ್ಯಾಹ್ನವಷ್ಟೇ ಪ್ರಕಟವಾಗಿದೆ. ಕೆಲವು ಮಕ್ಕಳು ಹುಮಸ್ಸು, ಉತ್ಸುಕತೆ ಮತ್ತು ಕಾತರದಿಂದ ಫಲಿತಾಂಶಕ್ಕಾಗಿ ಕಾಯುತ್ತಿದ್ದರು. ಕೆಲವರು ಮಾತ್ರ, ಅಯ್ಯೋ ಫಲಿತಾಂಶದ ದಿನ ಬಂದೇ ಬಿಡ್ತು ಎನ್ನುವ ಭಯ ಮತ್ತು ಆತಂಕಕ್ಕೆ ಒಳಗಾಗಿದ್ದರು. ಪೋಷಕರಿಗಂತೂ ಇನ್ನಿಲ್ಲದ ದುಗುಡ ಮತ್ತು ಒತ್ತಡ. ನನ್ನ ಮಗಳಿಗೆ/ನಿಗೆ ಕಡಿಮೆ ಅಂಕಗಳು ಬಂದರೆ ಅಥವಾ ಫೇಲ್ ಆದರೆ ಏನು ಮಾಡಬೇಕೆಂದು ತೋಚದೇ ಚಿಂತೆಗೀಡಾಗಿದ್ದರು. ಈಗ ಫಲಿತಾಂಶವಂತೂ ಗೊತ್ತಾಗಿದೆ. ಆದರೂ ಕೆಲ ಪೋಷಕರು ತಮ್ಮ ಮಕ್ಕಳಿಗೆ ಕಡಿಮೆ ಅಂಕ ಬಂತು ಎನ್ನುವ ಕಾರಣಕ್ಕೋ ಅಥವಾ ನಪಾಸಾದರು (ಫೇಲ್) ಎನ್ನುವ ಕಾರಣಕ್ಕೂ ಅವರು ನಿಷ್ಪ್ರಯೋಜಕರು, ಅವರಿಗೆ ಭವಿಷ್ಯವೇ ಇಲ್ಲವೆಂದು ಒದ್ದಾಡುತ್ತಿದ್ದಾರೆ.

ಒಂದು ವೇಳೆ ನಿಮ್ಮ ಮಗುವಿನ ಫಲಿತಾಂಶ ಫೇಲ್ ಆಗಿದ್ದರೆ ಅಥವಾ ಕನಿಷ್ಠ ಅಂಕಗಳು ಬಂದಿದ್ದರೆ ನಿಮ್ಮ ಪ್ರತಿಕ್ರಿಯೆ ಹೇಗಿತ್ತು? ನೀವು ಹೇಗೆ ಪ್ರತಿಕ್ರಿಯಿಸಬೇಕಿತ್ತು? ಮೇಲ್ನೋಟಕ್ಕೆ ಈ ಎರಡೂ ಪ್ರಶ್ನೆಗಳೂ ಒಂದೇ ಎನಿ...