ಭಾರತ, ಏಪ್ರಿಲ್ 21 -- ಎಸ್ಎಸ್ಎಲ್‌ಸಿ ಮತ್ತು ಪಿಯುಸಿ ಪಾಸಾದ ಹೆಚ್ಚಿನ ವಿದ್ಯಾರ್ಥಿಗಳಿಗೆ ಮುಂದೇನು ಎಂಬ ಚಿಂತೆ ಇರುತ್ತದೆ. ಕೆಲವು ವಿದ್ಯಾರ್ಥಿಗಳು ನಿರ್ದಿಷ್ಠ ಗುರಿಯೊಂದಿಗೆ ಕೋರ್ಸ್‌ ಆರಿಸಿಕೊಂಡರೆ, ಇನ್ನೂ ಕೆಲವು ವಿದ್ಯಾರ್ಥಿಗಳು ತಮ್ಮ ಆಸಕ್ತಿಯ ಕೋರ್ಸ್‌ಗೆ ಹುಡುಕುತ್ತಾರೆ. ಕಲಾ ಕ್ಷೇತ್ರದಲ್ಲಿ ಆಸಕ್ತಿ ಇರುವವರಿಗೆ ಇಲ್ಲೊಂದು ಕೋರ್ಸ್‌ ಕುರಿತ ಮಾಹಿತಿ ಇದೆ. ಇದುವೇ ದೃಶ್ಯಕಲಾ ಪದವಿ. ಇಂಗ್ಲೀಷ್‌ನಲ್ಲಿ ಇದನ್ನು ಬಿವಿಎ (ಬ್ಯಾಚುಲರ್‌ ಆಫ್‌ ವಿಷುವಲ್‌ ಆರ್ಟ್ಸ್‌) ಎಂದು ಹೇಳಲಾಗುತ್ತದೆ. ಪಿಯುಸಿ ಪಾಸಾದ ವಿದ್ಯಾರ್ಥಿಗಳು ಬಿವಿಎ ಅಧ್ಯಯನ ಮಾಡಬಹುದು. ಎಸ್‌ಎಸ್‌ಎಲ್‌ಸಿ ಆದ ನಂತರವೂ ದೃಶ್ಯಕಲಾ ವಿಷಯದಲ್ಲಿ ಆರಂಭಿಕ ಶಿಕ್ಷಣ ಪಡೆಯುವ ಅವಕಾಶವಿದೆ. ಈ ಕೋರ್ಸ್‌ ಕುರಿತ ವಿಸ್ತೃತ ಮಾಹಿತಿ ಇಲ್ಲಿದೆ.

ಈಗೀಗ ತಾಂತ್ರಿಕ ಶಿಕ್ಷಣಕ್ಕಿಂತ ಸೃಜನಶೀಲ ಕೋರ್ಸ್‌ಗಳಿಗೆ ಬೇಡಿಕೆ ಹೆಚ್ಚು. ಕೌಶಲ್ಯಗಳಿದ್ದರೆ ಅದಕ್ಕೆ ಉತ್ತಮ ವ್ಯಾಪ್ತಿಯೂ ಇರುತ್ತದೆ. ವಿದ್ಯಾರ್ಥಿಗಳು ಸೃಜನಶೀಲ ಪ್ರಾಯೋಗಿಕ ಶಿಕ್ಷಣದ ಆಯ್ಕೆ ಮಾಡಿಕೊಂಡು ತಮ್ಮದೇ ಆದ ...