ಭಾರತ, ಮೇ 12 -- ಪಿಯುಸಿ ನಂತರ ಮುಂದೇನು ಎಂಬ ಚಿಂತೆಯಲ್ಲಿರುವ ವಿದ್ಯಾರ್ಥಿಗಳಿಗೆ ನರ್ಸಿಂಗ್‌ ಕಲಿಕೆ ಒಂದು ಪ್ರಮುಖ ಆಯ್ಕೆ. ಆರೋಗ್ಯ ಕ್ಷೇತ್ರದಲ್ಲಿ ವೃತ್ತಿಜೀವನ ರೂಪಿಸಲು, ನರ್ಸಿಂಗ್ ಕೋರ್ಸ್‌ ಮೂಲಕ ಅಗತ್ಯ ಶಿಕ್ಷಣ ಮತ್ತು ತರಬೇತಿಯನ್ನು ಪಡೆಯಬಹುದು. ಈ ಕೋರ್ಸ್‌ಗಳು ರೋಗಿಗಳ ಆರೈಕೆ, ಮೌಲ್ಯಮಾಪನ, ವೈದ್ಯಕೀಯ ಕಾರ್ಯವಿಧಾನಗಳು ಮತ್ತು ಆರೋಗ್ಯ ನಿರ್ವಹಣೆ ಸೇರಿದಂತೆ ನರ್ಸಿಂಗ್‌ ಕ್ಷೇತ್ರಕ್ಕೆ ಸಂಬಂಧಿಸಿದ ವಿವಿಧ ಅಂಶಗಳನ್ನು ಒಳಗೊಂಡಿರುತ್ತದೆ. ಈ ಕೋರ್ಸ್‌ ಕುರಿತ ವಿಸ್ತೃತ ಮಾಹಿತಿ ಹಾಗೂ ಉದ್ಯೋಗಾವಕಾಶಗಳ ಕುರಿತ ಸರಳ ವಿವರಣೆಯನ್ನು ಇಲ್ಲಿ ಓದಿ.

ಸಾಮಾನ್ಯ ನರ್ಸಿಂಗ್ ಕೋರ್ಸ್‌ಗಳಲ್ಲಿ ಬ್ಯಾಚುಲರ್ ಆಫ್ ಸೈನ್ಸ್ ಇನ್ ನರ್ಸಿಂಗ್ ಅಥವಾ ಬಿಎಎಸ್‌ಸಿ ನರ್ಸಿಂಗ್ ಎಂಬ ಡಿಗ್ರಿ ಕೋರ್ಸ್‌ ಇರುತ್ತದೆ. ಇದೇ ವೇಳೆ ಜನರಲ್ ನರ್ಸಿಂಗ್ ಮತ್ತು ಮಿಡ್‌ವೈಫರಿ (GNM) ಕೋರ್ಸ್‌ ಕೂಡಾ ಇದೆ. ವಿದ್ಯಾರ್ಥಿಗಳು ಇಚ್ಛೆ ಹಾಗೂ ಸಾಮರ್ಥ್ಯ ಅನುಸಾರ ಕೋರ್ಸ್ ಆಯ್ಕೆ ಮಾಡಬಹುದು.

ಬಿ.ಎಸ್‌ಸಿ ನರ್ಸಿಂಗ್: 4 ವರ್ಷಗಳ ಪದವಿಪೂರ್ವ ಕೋರ್ಸ್‌ನಲ್ಲಿ...