ಭಾರತ, ಫೆಬ್ರವರಿ 15 -- ಪ್ರಿಯ ವಿದ್ಯಾರ್ಥಿಗಳೇ, ಪಿಯುಸಿ ಪರೀಕ್ಷೆ ಆರಂಭಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಅತ್ತ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಇನ್ನೂ ಒಂದು ತಿಂಗಳು ಬಾಕಿ ಇದೆ. ಅಂತಿಮ ಸಿದ್ಧತೆ ನಡೆಸಲು ಇದು ಸೂಕ್ತ ಸಮಯ. ಇದುವರೆಗೂ ಸರಿಯಾಗಿ ಓದಲು ಸಾಧ್ಯವಾಗಿಲ್ಲ ಎನ್ನುವ ವಿದ್ಯಾರ್ಥಿಗಳಿಗೆ ಇನ್ನೂ ಕಾಲ ಮಿಂಚಿಲ್ಲ. ಇಂದಿನಿಂದ ಯೋಜಿಸಿ ಸಿದ್ಧತೆ ನಡೆಸಿದರೆ, ಉತ್ತಮ ಅಂಕಗಳನ್ನು ಕಲೆ ಹಾಕಬಹುದು. ನಿತ್ಯ ಓದಿಗೆ ಸಮಯ ಮೀಸಲಿರಿಸಿ, ಶ್ರದ್ಧೆಯಿಂದ ಓದಿನಲ್ಲಿ ತೊಡಗಿಕೊಂಡರೆ ಪರೀಕ್ಷೆಯಲ್ಲಿ ಯಶಸ್ವಿಯಾಗಬಹುದು. ಇದಕ್ಕಾಗಿ ನೀವು ಸೂಕ್ತ ವೇಳಾಪಟ್ಟಿಯನ್ನು ರಚಿಸಿಕೊಂಡು ಅದರಂತೆ ಓದಿಗೆ ಕುಳಿತುಕೊಳ್ಳುವುದು ಉತ್ತಮ.

ವಿದ್ಯಾರ್ಥಿಗಳ ಓದಿನ ವೇಳಾಪಟ್ಟಿ ಎಂದರೆ, ಅದರಲ್ಲಿ ದಿನದ ಎಲ್ಲಾ ಸಮಯದಲ್ಲೂ ಬರೀ ಓದಿಗೆ ಮೀಸಲಿಡಬೇಕು ಎಂದೇನಿಲ್ಲ. ಇದರಲ್ಲಿ ಓದಿನ ಜೊತೆಗೆ, ಮನನ (ರಿವಿಷನ್)‌, ವೈಯಕ್ತಿಕ ಕೆಲಸ, ಊಟೋಪಹಾರ, ಇತರ ಚಟುವಟಿಕೆ, ಆಟ ಎಲ್ಲವೂ ಸೇರುತ್ತದೆ. ಈ ಎಲ್ಲವನ್ನೂ ಒಳಗೊಂಡ ಅರ್ಥಪೂರ್ಣ ವೇಳಾಪಟ್ಟಿ ರಚಿಸಿ ಅದರಂ...