ಭಾರತ, ಏಪ್ರಿಲ್ 8 -- ಸ್ಕ್ಯಾನ್ಡ್‌ ಪ್ರತಿಗೆ ಅರ್ಜಿಹೆಚ್ಚು ಅಂಕ ಬರಬೇಕಿತ್ತು, ಆದರೆ ಕಡಿಮೆ ಬಂದಿದೆ ಎನ್ನುವ ಅನುಮಾನವಿರುವ ವಿದ್ಯಾರ್ಥಿಗಳು ಉತ್ತರ ಪತ್ರಿಕೆಯ ಸ್ಕ್ಯಾನ್ಡ್‌ ಪ್ರತಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಏಪ್ರಿಲ್ 8 ರಿಂದ ಏಪ್ರಿಲ್ 13 ರವರೆಗೆ ಅವರಕಾಶವಿದೆ.

ಸ್ಕ್ಯಾನ್ಡ್‌ ಪ್ರತಿ ಡೌನ್‌ಲೋಡ್ಉತ್ತರ ಪತ್ರಿಕೆಗಳ ಸ್ಕ್ಯಾನ್ಡ್‌ ಕಾಪಿಗಳನ್ನು ಡೌನ್‌ಲೋಡ್ ಮಾಡಿಕೊಳ್ಳಲು ಏಪ್ರಿಲ್ 12 ರಿಂದ ಅವಕಾಶವಿರುತ್ತದೆ. ಏಪ್ರಿಲ್ 16 ಕೊನೆಯ ದಿನ.

ಶುಲ್ಕ ವಿವರಸ್ಕ್ಯಾನ್ಡ್‌ ಪ್ರತಿ ಪಡೆಯಲು ಪ್ರತಿ ವಿಷಯಕ್ಕೆ ರೂ 530, ಮರುಮೌಲ್ಯಮಾಪನಕ್ಕೆ ರೂ 1670 ಶುಲ್ಕ ವಿಧಿಸಲಾಗಿದೆ. ಮರುಎಣಿಕೆಗೆ ಯಾವುದೇ ಶುಲ್ಕ ಇರುವುದಿಲ್ಲ.

ಅಂಕ ಸುಧಾರಣೆಗೆ ಅವಕಾಶ: ಪರೀಕ್ಷೆ-2ಎಲ್ಲ ವಿದ್ಯಾರ್ಥಿಗಳಿಗೂ ಅಂಕ ಉತ್ತಮಪಡಿಸಿಕೊಳ್ಳಲು 'ಪರೀಕ್ಷೆ-2' ತೆಗೆದುಕೊಳ್ಳಲು ಅವಕಾಶ ನೀಡಲಾಗಿದೆ. ಇಂದಿನಿಂದಲೇ ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಯಾವುದೇ ದಂಡ ಶುಲ್ಕವಿಲ್ಲದೆ ಏಪ್ರಿಲ್ 15 ರ ಒಳಗೆ ಅರ್ಜಿ ಸಲ್ಲಿಸಬಹುದು....