ಭಾರತ, ಜನವರಿ 28 -- ಪ್ರೊ ಕಬಡ್ಡಿ ಲೀಗ್‌ 12ನೇ ಆವೃತ್ತಿಗೂ ಮುನ್ನ ಬೆಂಗಳೂರು ಬುಲ್ಸ್ ತಂಡದಿಂದ ಆಶ್ಚರ್ಯಕರ ಬೆಳವಣಿಗೆಯೊಂದು ನಡೆದಿದೆ. ಪಿಕೆಎಲ್‌ನ ಜನಪ್ರಿಯ ಫ್ರಾಂಚೈಸಿಯು ತಂಡದಲ್ಲಿ ಸುದೀರ್ಘ ಅವಧಿಗೆ ಸೇವೆ ಸಲ್ಲಿಸಿದ್ದ ಕೋಚ್‌ ರಣಧೀರ್ ಸಿಂಗ್ ಸೆಹ್ರಾವತ್ ಅವರನ್ನು ರಿಲೀಸ್‌ ಮಾಡಿದೆ. ಬುಲ್ಸ್ ತಂಡವು ಮೊದಲ ಸೀಸನ್‌ನಲ್ಲಿಯೇ ರಣಧೀರ್ ಅವರನ್ನು ತಮ್ಮ ಮುಖ್ಯ ಕೋಚ್ ಆಗಿ ನೇಮಿಸಿತ್ತು. ಸತತ 11 ಸೀಸನ್‌ಗಳಿಗೆ ಒಂದೇ ಕೋಚ್ ಅನ್ನು ಉಳಿಸಿಕೊಂಡ ಏಕೈಕ ಫ್ರಾಂಚೈಸಿ ಬೆಂಗಳೂರು ಬುಲ್ಸ್‌. ಇದೀಗ ಅವರೊಂದಿಗಿನ ಸುದೀರ್ಘ ನಂಟು ಕೊನೆಗೊಂಡಿದೆ. ಹೀಗಾಗಿ ಫ್ರಾಂಚೈಸಿಯ ನಿರ್ಧಾರ ಅಭಿಮಾನಿಗಳಿಗೆ ಅಚ್ಚರಿ ತಂದಿದೆ.

(ಸುದ್ದಿ ಅಪ್ಡೇಟ್‌ ಆಗಲಿದೆ)

Published by HT Digital Content Services with permission from HT Kannada....