ಭಾರತ, ಮೇ 4 -- ಉನ್ನತ ಶಿಕ್ಷಣ ಪಡೆಯಬೇಕು ಎನ್ನುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಕನಸು. ಉತ್ತಮ ಶಿಕ್ಷಣ ಸಂಸ್ಥೆಗೆ ಪ್ರವೇಶ ಪಡೆಯಲು ಉತ್ತಮ ಅಂಕವನ್ನೂ ಗಳಿಸಬೇಕು. ಆದರೆ ಬಹುತೇಕ ಪ್ರತಿಭಾವಂತ ವಿದ್ಯಾರ್ಥಿಗಳು ಆರ್ಥಿಕವಾಗಿ ಹಿಂದುಳಿದಿರುತ್ತಾರೆ. ಅವರು ಉನ್ನತ ಶಿಕ್ಷಣ ಪಡೆಯುವುದೇ ದೊಡ್ಡ ಸವಾಲು. ಹಣಕಾಸಿನ ಸಮಸ್ಯೆಯು ಅವರ ಕನಸುಗಳಿಗೆ ಅಡ್ಡಿಯಾಗುತ್ತಿದೆ. ಅಂತಹ ವಿದ್ಯಾರ್ಥಿಗಳಿಗೆ ನೆರವಾಗುವ ಸಲುವಾಗಿ ಭಾರತ ಸರ್ಕಾರ ಹೆಜ್ಜೆ ಇಟ್ಟಿದ್ದು, ಪಿಎಂ ವಿದ್ಯಾಲಕ್ಷ್ಮಿ ಶಿಕ್ಷಣ ಸಾಲ ಯೋಜನೆ ಜಾರಿಗೆ ತಂದಿದೆ.

2024ರ ನವೆಂಬರ್​​ನಲ್ಲಿ ಕೇಂದ್ರ ಸಚಿವ ಸಂಪುಟವು ಪ್ರಧಾನ ಮಂತ್ರಿ ವಿದ್ಯಾಲಕ್ಷ್ಮಿ (ಪಿಎಂ ವಿದ್ಯಾಲಕ್ಷ್ಮಿ) ಯೋಜನೆಗೆ ಅನುಮೋದನೆ ನೀಡಿತು. ಗುಣಮಟ್ಟದ ಉನ್ನತ ಶಿಕ್ಷಣ ಪಡೆಯಲು ಸಾಧ್ಯವಾಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಾಲದ ನೆರವು ಒದಗಿಸುವುದೇ ಇದರ ಉದ್ದೇಶ. ಈ ಯೋಜನೆಯ ಮೂಲಕ ಅಗ್ರ 860 ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯಲು ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡಲು ಸರ್ಕಾರ ಯೋಜಿಸಿದೆ. ಇದು ಪ...