New Delhi, ಜುಲೈ 16 -- ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ ಕಿಸಾನ್ ನಿಧಿ) ಯೋಜನೆಯ 20ನೇ ಕಂತಿನ ಹಣ ಇದೇ ತಿಂಗಳು ಬಿಡುಗಡೆಯಾಗಲಿದೆ. ಈ ಯೋಜನೆಯ ಫಲಾನುಭವಿಗಳಾಗಿರುವ ದೇಶದ ಕೋಟ್ಯಂತರ ರೈತರು 2000 ರೂಪಾಯಿ ಪಿಎಂ ಕಿಸಾನ್ ಕಂತಿನ ಹಣ ಜಮೆಯಾಗುವುದನ್ನೇ ನಿರೀಕ್ಷಿಸುತ್ತಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಶೀಘ್ರವೇ ಪಿಎಂ ಕಿಸಾನ್ ನಿಧಿಯ ಹಣ ಬಿಡುಗಡೆ ಮಾಡುವ ನಿರೀಕ್ಷೆ ಇದೆ. ಇದರ ಸಂಭಾವ್ಯ ದಿನಾಂಕವೂ ನಿಗದಿಯಾಗಿದ್ದು ಆ ವಿವರ ಇಲ್ಲಿದೆ.

ಪಿಎಂ ಕಿಸಾನ್ ಕಂತು ಪ್ರತಿ ನಾಲ್ಕು ತಿಂಗಳಿಗೆ ಒಮ್ಮೆ ಬಿಡುಗಡೆಯಾಗುತ್ತಿದ್ದು, 19ನೇ ಕಂತು ಫೆಬ್ರವರಿ 2025ರಲ್ಲಿ ಬಿಡುಗಡೆಯಾಗಿತ್ತು. 2024ರಲ್ಲಿ ಜೂನ್ ತಿಂಗಳಲ್ಲಿ ಕಂತಿನ ಹಣ ಬಿಡುಗಡೆಯಾಗಿತ್ತು. ಈ ಬಾರಿ ಪಿಎಂ ಕಿಸಾನ್ ಕಂತು ಬಿಡುಗಡೆ ತಡವಾಗಿದೆ. ಝೀ ನ್ಯೂಸ್ ವರದಿ ಪ್ರಕಾರ, ಪಿಎಂ ಕಿಸಾನ್ ಯೋಜನೆಯ 20ನೇ ಕಂತಿನ ಹಣ ಜುಲೈ 18 ರಂದು ಬಿಡುಗಡೆಯಾಗಬಹುದು. ಆದಾಗ್ಯೂ, ಈ ವಿಚಾರವನ್ನು ಭಾರತ ಸರ್ಕಾರ ದೃಢೀಕರಿಸಿಲ್ಲ.

ಮಾಧ್ಯಮ ವರದಿಗಳ ಪ್ರಕಾರ, ಪ್ರಧಾನ...