New Delhi, ಮಾರ್ಚ್ 2 -- ನವದೆಹಲಿ: ಭಾರತದಲ್ಲಿ ಪಾಸ್‌ಪೋರ್ಟ್‌ ಮಾಡಿಸಲು ಇರುವ ನಿಯಮಗಳಿಗೆ ತಿದ್ದುಪಡಿ ಮಾಡಲಾಗಿದೆ. ಅದರಂತೆ, 2023ರ ಅಕ್ಟೋಬರ್ 1ರಿಂದ ಜನಿಸಿದವರು ಇನ್ಮುಂದೆ ಪಾಸ್‌ಪೋರ್ಟ್‌ ಪಡೆಯಲು ದಾಖಲೆಯಾಗಿ ಜನನ ಪ್ರಮಾಣ ಪತ್ರ‌ವನ್ನು ( birth certificate) ಕಡ್ಡಾಯವಾಗಿ ಸಲ್ಲಿಸಬೇಕು ಎಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. 1980ರ ಪಾಸ್‌ಪೋರ್ಟ್ ನಿಯಮಗಳನ್ನು ಸರ್ಕಾರ ತಿದ್ದುಪಡಿ ಮಾಡಿದ್ದು, ಜನನ ಮತ್ತು ಮರಣಗಳ ನೋಂದಣಿ, ನಗರ ಪಾಲಿಕೆ ಅಥವಾ ಇತರ ಯಾವುದೇ ಪ್ರಾಧಿಕಾರವು ನೀಡುವ ಜನನ ಪ್ರಮಾಣಪತ್ರಗಳನ್ನು ಪಾಸ್‌ಪೋರ್ಟ್‌ ಅರ್ಜಿಗಳಿಗೆ ಜನ್ಮ ದಿನಾಂಕದ ಏಕೈಕ ಪುರಾವೆಯನ್ನಾಗಿ ಮಾಡಲು ನಿರ್ಧರಿಸಿದೆ.

ಫೆ. 24ರಂದು ವಿದೇಶಾಂಗ ಸಚಿವಾಲಯ ಹೊರಡಿಸಿದ ಅಧಿಕೃತ ಅಧಿಸೂಚನೆಯಲ್ಲಿ ಈ ಕುರಿತು ಹೇಳಲಾಗಿದೆ. ಪಾಸ್‌ಪೋರ್ಟ್ ಕಾಯ್ದೆ 1967ರ ಸೆಕ್ಷನ್ 24ರ ನಿಬಂಧನೆಗಳ ಅಡಿಯಲ್ಲಿ ಪಾಸ್‌ಪೋರ್ಟ್ ನಿಯಮಗಳನ್ನು ತಿದ್ದುಪಡಿ ಮಾಡಲಾಗಿದೆ ಎಂದು ತಿಳಿಸಲಾಗಿದೆ.

ಅಧಿಕೃತ ಗೆಜೆಟ್‌ನಲ್ಲಿ ಪ್ರಕಟವಾದ ದಿನಾಂಕದಿಂದ ಜಾರಿಗೆ ಬರಲಿರು...